Advertisement

Asian ಒಲಿಂಪಿಕ್ಸ್‌  ಕ್ವಾಲಿಫೈಯರ್‌ ಶೂಟಿಂಗ್‌: ಶೆರಾನ್‌ಗೆ ಸ್ವರ್ಣ, ತೋಮರ್‌ಗೆ ಬೆಳ್ಳಿ

11:55 PM Jan 12, 2024 | Team Udayavani |

ಜಕಾರ್ತಾ: ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಅಖೀಲ್‌ ಶೆರಾನ್‌ ಮತ್ತು ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಕ್ಕೆ ಗುರಿ ಇರಿಸಿದ್ದಾರೆ. ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಈ ಸಾಧನೆ ದಾಖಲಾಯಿತು.

Advertisement

8 ಮಂದಿಯ ಫೈನಲ್‌ನಲ್ಲಿ ಅಖೀಲ್‌ ಶೆರಾನ್‌ 460.2 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಟೋಕಿಯೊ ಒಲಿಂಪಿಯನ್‌ ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ 459.0 ಅಂಕದೊಂದಿಗೆ ರಜತ ಪದಕವನ್ನು ತಮ್ಮದಾಗಿಸಿಕೊಂಡರು.

ಥಾಯ್ಲೆಂಡ್‌ನ‌ ತೊಂಗ್ಫಾಫ‌ುಮ್‌ ವೊಂಗ್ಸುಕ್ಡೀ ಕಂಚು ಗೆದ್ದರು (448.8). ಅರ್ಹತಾ ಸುತ್ತಿನಲ್ಲಿ ತೋಮರ್‌ 3ನೇ (588) ಮತ್ತು ಶೆರಾನ್‌ 6ನೇ ಸ್ಥಾನಿಯಾಗಿದ್ದರು (586) ತಂಡ ಸ್ಪರ್ಧೆಯಲ್ಲೂ ಚಿನ್ನ ಇದೇ ವಿಭಾಗದ ತಂಡ ಸ್ಪರ್ಧೆಯಲ್ಲೂ ಭಾರತಕ್ಕೆ ಬಂಗಾರ ಒಲಿಯಿತು (1,758 ಅಂಕ). ಅಖೀಲ್‌ ಶೆರಾನ್‌, ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌, ಸ್ವಪ್ನಿಲ್‌ ಕುಸಾಲೆ ಈ ತಂಡದ ಸದಸ್ಯರಾಗಿದ್ದರು. ಚೀನ ಮತ್ತು ದಕ್ಷಿಣ ಕೊರಿಯ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಸಂಪಾದಿಸಿದವು. ದ್ವಿತೀಯ ಸ್ಥಾನಿ ಚೀನಕ್ಕಿಂತ ಭಾರತ 14 ಅಂಕ ಹೆಚ್ಚು ಗಳಿಸಿತು.

ಶುಕ್ರವಾರದ ಸಾಧನೆಯೊಂದಿಗೆ ಈ ಕೂಟದಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ 24ಕ್ಕೆ ಏರಿತು. ಇದರಲ್ಲಿ 10 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳು ಸೇರಿವೆ. ಶನಿವಾರ ರ್ಯಾಪಿಡ್‌ ಫೈರ್‌ ಸ್ಪರ್ಧೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next