Advertisement
ಪುರುಷರ ಸಿಂಗಲ್ ಲೈಟ್‌ವೇಟ್ ಸ್ಕಲ್ಸ್ ವಿಭಾಗದಲ್ಲಿ ಅವರು ಈ ಸಾಧನೆಗೈದರು. ಜತೆಗೆ ಭಾರತಕ್ಕೆ 3 ಬೆಳ್ಳಿ ಪದಕಗಳೂ ಒಲಿದಿವೆ. ಒಟ್ಟು 2 ಚಿನ್ನ, 4 ಬೆಳ್ಳಿ ಪದಕಗಳೊಂದಿಗೆ ಭಾರತ ಕೂಟವನ್ನು ಮುಗಿಸಿತು.
ಬೆಳ್ಳಿ ಪದಕಗಳು ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್, ಕ್ವಾಡ್ರಾಪಲ್ ಸ್ಕಲ್ಸ್ ಮತ್ತು ಕಾಕ್ಸ್‌ಲೆಸ್ ಫೋರ್ ವಿಭಾಗಗಳಲ್ಲಿ ಒಲಿದು ಬಂದವು. ಡಬಲ್ ಸ್ಕಲ್ಸ್‌ನಲ್ಲಿ ಆಶಿಷ್ ಫುಗಟ್-ಸುಖ್‌ಜಿಂದರ್ ಸಿಂಗ್ (7:12.568 ಸೆಕೆಂಡ್); ಕ್ವಾಡ್ರಾಪಲ್ ಸ್ಕಲ್ಸ್‌ನಲ್ಲಿ ಬಿಟ್ಟು ಸಿಂಗ್, ಜಾಕರ್ ಖಾನ್, ಮನ್‌ಜಿàತ್ ಕುಮಾರ್ ಮತ್ತು ಸುಖಮೀತ್ ಸಿಂಗ್ (6:33.661 ಸೆಕೆಂಡ್); ಕಾಕ್ಸ್‌ಲೆಸ್‌ನಲ್ಲಿ ಜಸ್ವೀರ್ ಸಿಂಗ್, ಪುನೀತ್ ಕುಮಾರ್, ಗುರ್ಮೀತ್ ಸಿಂಗ್ ಮತ್ತು ಚರಣ್‌ಜೀತ್ ಸಿಂಗ್ (6:51.661 ಸೆಕೆಂಡ್) ದ್ವಿತೀಯ ಸ್ಥಾನಿಯಾದರು. ಕ್ವಾಡ್ರಾಪಲ್ ಸ್ಕಲ್ಸ್‌ನಲ್ಲಿ ಕೇವಲ 0.523 ಸೆಕೆಂಡ್‌ಗಳ ಅಂತರದಲ್ಲಿ ಚಿನ್ನ ಭಾರತದ ಕೈಜಾರಿತು.
Related Articles
Advertisement
ಕೂಟದಲ್ಲಿ ಉತ್ತಮ ಸಾಧನೆಗೈದ ರೋವರ್‌ಗಳನ್ನು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾದ ಮಹಾ ಕಾರ್ಯದರ್ಶಿ ಎಂ.ವಿ. ಶ್ರೀರಾಮ್ ಅಭಿನಂದಿಸಿದ್ದಾರೆ.