ಬ್ಯಾಂಕಾಕ್: ಭಾರತದ ಅರ್ಜುನ್ ಲಾಲ್ ಜಾಟ್-ರವಿ ಜೋಡಿ ಇಲ್ಲಿ ನಡೆಯುತ್ತಿರುವ ಏಶ್ಯನ್ ರೋಯಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ.
ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಇವರು ಮೊದಲಿಗರಾಗಿ ಮೂಡಿಬಂದರು. ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಪರ್ಮಿಂದರ್ ಸಿಂಗ್ ಬೆಳ್ಳಿ ಪದಕ ಗೆದ್ದರು.
ಅರ್ಜುನ್-ರವಿ ಜೋಡಿ ಚೀನದ ಕ್ವಿಂಗ್ ಲೀ-ಲುಟಾಂಗ್ ಜಾಂಗ್, ಉಜ್ಬೆಕಿಸ್ಥಾನದ ಡಾವಜೋìನ್ ಡಾವ್ರೊನೋವ್-ಅಬ್ದುಲ್ಲ ಮುಖಮ್ಮದೀವ್ ಅವರನ್ನು ಹಿಂದಿಕ್ಕಿ ಚಿನ್ನವನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ:ಬ್ಯಾಡ್ಮಿಂಟನ್: ಪ್ರಶಸ್ತಿ ಉಳಿಸಿಕೊಂಡಾರೇ ಪಿ.ವಿ. ಸಿಂಧು?
ಟೋಕಿಯೊ ಒಲಿಂಪಿಯನ್‌ಗಳಾದ ಅರ್ಜುನ್-ರವಿ 6:57.883 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಚೀನದ ಜೋಡಿ 7:02.374 ಸೆಕೆಂಡ್‌ಗಳಲ್ಲಿ, ಉಜ್ಬೇಕ್ ಜೋಡಿ 7:07.734 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿತು. ಇದು ಭಾರತಕ್ಕೆ ಏಶ್ಯನ್ ರೋಯಿಂಗ್ ಡಬಲ್ಸ್ ಸ್ಕಲ್ಸ್‌ನಲ್ಲಿ ಒಲಿದ ಸತತ 2ನೇ ಪದಕ. 2019ರಲ್ಲಿ ಕಂಚು ಲಭಿಸಿತ್ತು.
ಅನಂತರದ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಪರ್ಮಿಂದರ್ ಸಿಂಗ್ 8:07.323 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನಿಯಾದರು. ಉಜ್ಬೆಕಿಸ್ಥಾನದ ಖುಲ್ಮುಜೇìವ್ ಶಕೊºàಜ್ ಚಿನ್ನ ಗೆದ್ದರು (7:56.307 ಸೆಕೆಂಡ್).