ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಮಧ್ಯೆ ರಾಯಾಪುರದಲ್ಲಿ ಶ್ರೀಕೃಷ್ಣ ಗ್ರೂಪ್ ಸಮೂಹ ಸಂಸ್ಥೆ ಹೆಲ್ದಿ ಕೌಂಟಿ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್ ಪ್ರವರ್ತಿತ ಹಾಗೂ ಓಶಿಯನ್ ಪರ್ಲ್ ಸಂಸ್ಥೆ ಪ್ರಗತಿ ಪಾಲುದಾರರಾಗಿರುವ “ದಿ ಓಶಿಯನ್ ಪರ್ಲ್ ರೆಸಾರ್ಟ್ ಆ್ಯಂಡ್ ಸ್ಪಾ’ ಸೋಮವಾರ ಉದ್ಘಾಟನೆಗೊಂಡಿತು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ರೆಸಾರ್ಟ್ ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದು. ಇಲ್ಲಿ ದೊಡ್ಡ ಕಂಪನಿಗಳು ಸ್ಥಾಪನೆಯಾಗುತ್ತಿವೆ. ಬೇರೆ ಬೇರೆ ಭಾಗಗಳಿಂದ ಉದ್ಯಮಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಇಂತಹ ಸಂದರ್ಭ ಅವರೆಲ್ಲರ ಬೇಡಿಕೆ ಈಡೇರಿಸವ ಒಂದೇ ಸೂರಿನಡಿ ಸುವ್ಯವಸ್ಥೆಯ ರೆಸಾರ್ಟ್ ಅವಶ್ಯಕತೆಯಿತ್ತು. ಪೈ ಸಹೋದರರು ಅದನ್ನು ಸಾಕಾರಗೊಳಿಸಿದ್ದಾರೆ. ಅವರಿಂದ ಇನ್ನಷ್ಟು ಇಂತಹ ರೆಸಾರ್ಟ್‌ಗಳ ಸ್ಥಾಪನೆಯಾಗಲಿ. ಈ ಉದ್ಯಮ ಪ್ರಗತಿ ಹೊಂದಲಿ ಎಂದು ಅವರು ಹೇಳಿದರು.
ಮುಖ್ಯ ಅತಿಥಿ ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ| ವಿಜಯ ಸಂಕೇಶ್ವರ ಮಾತನಾಡಿ, ಕಳೆದ ಐದು ವರ್ಷಗಳಿಂದ ಹು-ಧಾ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭ ವ್ಯವಸ್ಥಿತ ಹೊಟೇಲ್ ಹಾಗೂ ರೆಸಾರ್ಟ್ ತುಂಬಾ ಅವಶ್ಯಕತೆಯಿತ್ತು. ಇನ್ನೂ ಐದಾರು ಇಂತಹ ರೆಸಾರ್ಟ್‌ಗಳು ಆರಂಭವಾದರೂ ಯಶಸ್ವಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.
ಕಾರ್ಯದಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ ಎನ್ನುವುದಕ್ಕೆ ಪೈ ಸಹೋದರರೇ ನಿದರ್ಶನ. ಅವರು ನಡೆಸಿಕೊಂಡು ಬಂದಿರುವ ಕೃಷ್ಣ ಹಾಲು ಉತ್ಪನ್ನಗಳು ಶ್ರೇಷ್ಠತೆಯನ್ನು ಗಳಿಸಿವೆ ಎಂದು ಶ್ಲಾ ಸಿದರು. ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಮದಾಸ ಕಾಮತ, ದಿ ಓಶಿಯನ್ ಪರ್ಲ್ ಸಾಗರ ರತ್ನ ಗ್ರೂಪ್ ಆಫ್ ಹೋಟೆಲ್ಸ್ ಚೇರ್ಮನ್ ಜಯರಾಮ ಬನನ,
-ರಂಗಪ್ಪ ಕಾಮತ ಗ್ರೂಪ್ ಆಫ್ ಹೋಟೆಲ್ಸ್ ಚೇರ್ಮನ್ ಆರ್.ಆರ್.ಕಾಮತ, ಉದ್ಯಮಿಗಳಾದ ಅಸ್ಲಂ ಬಲ್ಲಿ, ಎಸ್.ಎ.ರಜಾಕ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮೋಹನ ಶೆಟ್ಟರ, ರೆಸಾರ್ಟ್ ರೂವಾರಿಗಳಾದ ಹನುಮಂತ ಪೈ, ದಿನೇಶ ಪೈ, ಪ್ರದೀಪ ಪೈ ಇನ್ನಿತರರು ಉಪಸ್ಥಿತರಿದ್ದರು.