Advertisement

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

10:24 PM Apr 18, 2021 | Team Udayavani |

ಅಲ್ಮಾಟಿ (ಕಜಾಕ್‌ಸ್ಥಾನ್‌) : ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ಭಾರತದ ದೀಪಕ್‌ ಪೂನಿಯ ಬೆಳ್ಳಿ, ಸಂಜೀತ್‌ ಮತ್ತು ರವೀಂದರ್‌ ಕಂಚಿನ ಪದಕ ಗೆದ್ದರು.

Advertisement

86 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದೀಪಕ್‌ ಪೂನಿಯ ಅವರಿಗೆ ಇರಾನಿಯನ್‌ ಲೆಜೆಂಡ್‌ ಹಸನ್‌ಗೆ ಸಾಟಿಯಾಗಲು ಸಾಧ್ಯವಾಗಲಿಲ್ಲ. ಮೊದಲ ಅವಧಿಯಲ್ಲೇ ಭಾರತೀಯ ಸೋಲುನ ಖಚಿತವಾಗಿತ್ತು.

92 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತತದ ಸಂಜೀತ್‌ ಉಜ್ಬೆಕಿಸಾªನದ ರುಸ್ತಮ್‌ ಶೊದೀವ್‌ ವಿರುದ್ಧ 11-8ರಿಂದ ಮೇಲುಗೈ ಸಾಧಿಸಿ ಕಂಚು ಗೆದ್ದರು. 61 ಕೆ.ಜಿ. ವಿಭಾಗದಲ್ಲಿ ರವೀಂದರ್‌ ಅವರಿಗೂ ಕಂಚು ಒಲಿಯಿತು.

ಇದನ್ನೂ ಓದಿ :ಅಂತಾರಾಷ್ಟ್ರೀಯ ವನಿತಾ ಹಾಕಿ ರೆಫ್ರಿ ಕೊಡಗಿನ ಅನುಪಮಾ ಕೋವಿಡ್‌ಗೆ ಬಲಿ

Advertisement

Udayavani is now on Telegram. Click here to join our channel and stay updated with the latest news.

Next