Advertisement

ಏಶ್ಯನ್‌ ಗೇಮ್ಸ್‌: 53 ಆ್ಯತ್ಲೀಟ್‌ಗಳ ತಂಡ ಪ್ರಕಟ

03:48 PM Jul 02, 2018 | |

ಹೊಸದಿಲ್ಲಿ:  ಮುಂದಿನ ತಿಂಗಳ 18ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಶ್ಯಾಡ್‌ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತದ 53 ಆ್ಯತ್ಲೀಟ್‌ಗಳ ಪಟ್ಟಿಯನ್ನು ಭಾರತೀಯ ಆ್ಯತ್ಲೆಟಿಕ್ಸ್‌ ಸಂಸ್ಥೆ (ಎಎಫ್ಐ) ಅಂತಿಮ ಗೊಳಿಸಿದೆ. ಇದೇ ತಿಂಗಳ 30ರೊಳಗೆ ಆಟಗಾರರ ಪಟ್ಟಿಯನ್ನು ಕ್ರೀಡಾಕೂಟದ ಆಯೋಜಕರಿಗೆ ರವಾನಿಸಬೇಕಿರುವುದರಿಂದ ಪಟ್ಟಿಯನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ (ಐಒಎ) ಸಲ್ಲಿಸಲಾಗಿದೆ.

Advertisement

ಇತ್ತೀಚೆಗೆ ಗುವಾಹಟಿಯಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ 22 ಆ್ಯತ್ಲೀಟ್‌ಗಳು ಏಶ್ಯಾಡ್‌ ಕ್ರೀಡಾ ಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಅರ್ಹತೆಗಾಗಿ ನಿಗದಿಪಡಿಸಿದ್ದ ಗುರಿಯ ಸನಿಹದವರೆಗೆ ಸಾಗಿದ ಆ್ಯತ್ಲೀಟ್‌ಗಳಿಗೂ ಅವಕಾಶ ಕಲ್ಪಿಸಿರುವುದು ಈ ಬಾರಿಯ ವಿಶೇಷ. ಈ ಮಾನದಂಡದಡಿ, ತಮಿಳುನಾಡಿನ ಓಟಗಾರ ಲಕ್ಷ್ಮಣನ್‌ ಹಾಗೂ ಶಾಟ್‌ ಪುಟರ್‌ ತೇಜಿಂದರ್‌ ಸಿಂಗ್‌ ಅವರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ನಾಲ್ಕು ದಿನದ ಆಯ್ಕೆ ಟ್ರಯಲ್ಸ್‌ ವೇಳೆ ಗುವಾಹಟಿಯಲ್ಲಿ ಅತೀವ ಬಿಸಿಲು ಇದ್ದಿದ್ದನ್ನು ಪರಿಗಣಿಸಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಫ್ಐ ಅಧ್ಯಕ್ಷ ಅದಿಲೆ ಸುಮರಿವಾಲ ತಿಳಿಸಿದ್ದಾರೆ.

ಆಯ್ಕೆ ಟ್ರಯಲ್ಸ್‌ನಲ್ಲಿದ್ದ ಹಿರಿಯ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹಾಗೂ ಡಿಸ್ಕಸ್‌ ಎಸೆತಗಾರ್ತಿ ಸೀಮಾ ಪೂನಿಯಾ ಅವರಿಗೆ ತಮ್ಮ ವಿಭಾಗದ ಆಯ್ಕೆ ಟ್ರಯಲ್ಸ್‌ಗಳ ಫೈನಲ್‌ ಸೆಣಸಿನಿಂದ ವಿನಾಯಿತಿ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next