ಹೊಸದಿಲ್ಲಿ: ಏಷ್ಯನ್ ಗೇಮ್ಸ್ ಆರಂಭಕ್ಕೂ ಮೊದಲೇ ಭಾರತ ದಾಖಲೆಯೊಂದನ್ನು ಬರೆ ದಿದೆ. ಈ ಬಾರಿಯ ಕ್ರೀಡಾಕೂಟಕ್ಕೆ ಅತ್ಯಧಿಕ 634 ಕ್ರೀಡಾಪಟುಗಳನ್ನು ಕಳುಹಿಸಲಿದೆ. 2018ರ ಜಕಾರ್ತಾ ಗೇಮ್ಸ್‌ಗೆ 572 ಆ್ಯತ್ಲೀಟ್‌ಗಳನ್ನು ರವಾ ನಿಸಿದ್ದು ಈವರೆಗಿನ ದಾಖಲೆ ಆಗಿತ್ತು.
ಶುಕ್ರವಾರ ಭಾರತದ ಆ್ಯತ್ಲೀಟ್ ಗಳ ಯಾದಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಧಿಕೃತ ಮುದ್ರೆ ಯೊತ್ತಿತು. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) 850 ಕ್ರೀಡಾಪಟುಗಳಿಗೆ ಅನುಮತಿ ನೀಡ ಬೇಕೆಂದು ಮನವಿ ಸಲ್ಲಿಸಿತ್ತು.
ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ ಯಾದಿಯಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್‌ಬಾಲ್ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್‌ಬಾಲ್ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.
ಆದರೆ ಕ್ರೀಡಾ ಸಚಿವಾಲಯ ವಿನ್ನೂ ಪುರುಷರ ವೇಟ್‌ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್ ಮತ್ತು ರಗಿº ತಂಡಗಳ ಆಟಗಾರರನ್ನು ಅಂತಿಮಗೊಳಿಸಿಲ್ಲ. ಸೆ. 23ರಿಂದ ಚೀನದ ಹಾಂಗ್‌ಝೂನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ.
ಬಜರಂಗ್ ಆಯ್ಕೆ
ಕಳೆದ ತಿಂಗಳ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ ನಲ್ಲಿ ಪಾಲ್ಗೊಳ್ಳದ ಕುಸ್ತಿಪಟು ಬಜರಂಗ್ ಪೂನಿಯ (65 ಕೆಜಿ) ಹೆಸರನ್ನು ಸಚಿವಾಲಯ ಯಾದಿಯಲ್ಲಿ ಸೇರಿಸಿದೆ.