Advertisement

“ಖ್ಯಾತಿಯಿಂದ ಪ್ರದರ್ಶನ ಕುಗ್ಗದಿರಲಿ’

06:00 AM Sep 06, 2018 | Team Udayavani |

ಹೊಸದಿಲ್ಲಿ: ಜಕಾರ್ತಾದಲ್ಲಿ ನಡೆದ ಏಶ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ದಿಲ್ಲಿ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ದರು. ಕ್ರೀಡಾ ಸಾಧಕರೊಂದಿಗೆ ಬೆರೆತು ಮುಕ್ತ ಮಾತುಕತೆ ನಡೆಸಿದರು. ಈ ಬಾರಿಯ ಏಶ್ಯನ್‌ ಗೇಮ್ಸ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದಾಖಲೆ ಸಂಖ್ಯೆಯ ಪದಕ ತಂದು ಕೊಟ್ಟ ಕ್ರೀಡಾಪಟುಗಳಿಗೆ ಅಭಿ ನಂದನೆ ಸಲ್ಲಿಸಿದ ಮೋದಿ, ಪ್ರತೀ ಸ್ಪರ್ಧೆಯಲ್ಲೂ ಹೀಗೆಯೇ ಪ್ರದರ್ಶನ ಮುಂದುವರಿಸಬೇಕು, ಖ್ಯಾತಿಯಿಂದ ಪ್ರದರ್ಶನ ಕುಗ್ಗಬಾರದು ಎಂದು ಹಿತವಚನ ಹೇಳಿದರು.

Advertisement

ತಂತ್ರಜ್ಞಾನದಿಂದ ಅಭಿವೃದ್ಧಿ
“ಕ್ರೀಡಾಪಟುಗಳು ತಂತ್ರಜ್ಞಾನದ ನೆರವಿನೊಂದಿಗೆ ತಮ್ಮ ಪ್ರದರ್ಶನ ವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಕೊಳ್ಳಬೇಕು. ಅಲ್ಲದೇ ಉನ್ನತ ಸಾಧನೆಗಾಗಿ ತಂತ್ರಜ್ಞಾನವನ್ನು ಬಳಸಿ ವಿಶ್ವದ ಅಗ್ರ ಕ್ರೀಡಾಪಟುಗಳ ಪ್ರದರ್ಶನದೊಂದಿಗೆ ತಮ್ಮ ಸಾಧನೆ ಯನ್ನು ಪರಾಮರ್ಶಿಸಬೇಕು. ಗೇಮ್ಸ್‌ ಸಾಧನೆಯೊಂದಿಗೆ ವಿಶ್ರಾಂತಿ ತೆಗೆದುಕೊಳ್ಳಬಾರದು. ಬದಲಾಗಿ ಇನ್ನಷ್ಟು ಕಠಿನ ಪರಿಶ್ರಮದೊಂದಿಗೆ ದೇಶದ ಕ್ರೀಡಾ ಪ್ರತಿಷ್ಠೆ ಹೆಚ್ಚಿಸುವಲ್ಲಿ ಶ್ರಮಿಸ ಬೇಕು. ಇಂದಿನಿಂದಲೇ ನಿಮಗೆಲ್ಲ ಮತ್ತೂಂದು ಬಹುದೊಡ್ಡ ಸವಾಲು ಆರಂಭವಾಗಿದೆ. ಅದು ಒಲಿಂಪಿಕ್ಸ್‌. ಇಲ್ಲಿ ನಿಮ್ಮ ಗುರಿ ಮರೆಯಬಾರದು’ ಎಂದು ನರೇಂದ್ರ ಮೋದಿ ಸಂವಾದದಲ್ಲಿ ತಿಳಿಸಿದರು.

ಗ್ರಾಮೀಣ ಪ್ರತಿಭೆಗಳಿಗೆ ಮೆಚ್ಚುಗೆ
ಗ್ರಾಮೀಣ ಪ್ರದೇಶದಿಂದ ಆಗಮಿ ಸಿದ ಯುವ ಪ್ರತಿಭೆಗಳ ಸಾಧನೆಗೆ ಪ್ರಧಾನ ಮಂತ್ರಿ ಮೋದಿ ಭಾರೀ ಖುಷಿ ವ್ಯಕ್ತಪಡಿಸಿದರು. ಈ ಸಂದರ್ಭ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪ್ರತಿಭೆಗಳಿವೆ. ಹಳ್ಳಿ ಪ್ರದೇಶಗಳಲ್ಲಿರುವ ಇಂಥ ನೈಜ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿ ಸುವ ಅಗತ್ಯವಿದೆ. ಕ್ರೀಡಾಪಟು ಗಳು ದೈನಂದಿನ ಜೀವನದಲ್ಲಿ ಯಾವ ರೀತಿ ಕಷ್ಟಪಡುತ್ತಾರೆ ಎಂಬುದರ ಬಗ್ಗೆ ಹೊರಗಿನ ಜಗತ್ತಿನವರಿಗೆ ಅರಿವಿಲ್ಲ’  
ನರೇಂದ್ರ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next