Advertisement
ಭಾರತ ತಂಡ ಇತ್ತೀಚೆಗಷ್ಟೇ ದಾಖಲೆ 4ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನೆತ್ತಿತ್ತು. ಆದರೆ ಏಷ್ಯನ್ ಗೇಮ್ಸ್ ಇದಕ್ಕೂ ಮಿಗಿಲಾದ ಕ್ರೀಡಾಕೂಟವಾಗಿದ್ದು, ಏಷ್ಯಾದ ಬಲಿಷ್ಠ ತಂಡಗಳೆಲ್ಲ ಕಣಕ್ಕಿಳಿಯಲಿವೆ. ತಂಡದ ಕೆಲವು ಪ್ರಮುಖ ದೋಷಗಳನ್ನು ತಿದ್ದಿಕೊಂಡು ಏಷ್ಯಾಡ್‌ಗೆ ಹುರಿಗೊಳಿಸುವುದು ಕೋಚ್ ಕ್ರೆಗ್ ಫುಲ್ಟನ್ ಅವರ ಯೋಜನೆ.
“ಕಳೆದ ಕೆಲವು ತಿಂಗಳಿಂದ ನಾವು ಬೆಳವಣಿಗೆ ಕಾಣುತ್ತ ಬಂದಿದ್ದೇವೆ. ನಿರಂತರವಾಗಿ ಕಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಏಷ್ಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸುವ ಉದ್ದೇಶದಿಂದ ಈ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಚೆನ್ನೈಯಲ್ಲಿ ನಡೆದ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ನಾವು ಅಜೇಯ ಅಭಿಯಾನಗೈದು ಪ್ರಶಸ್ತಿ ಗೆದ್ದೆವು. ಏಷ್ಯಾಡ್‌ನಲ್ಲೂ ಇದೇ ಮಟ್ಟದ ನಿರ್ವಹಣೆಯನ್ನು ಕಾಯ್ದುಕೊಳ್ಳಬೇಕಿದೆ’ ಎಂಬುದಾಗಿ ಫುಲ್ಟನ್ ಹೇಳಿದರು.