Advertisement

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

08:50 AM Sep 29, 2023 | Team Udayavani |

ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. 50 ಮೀಟರ್ ರೈಫಲ್ ವಿಭಾಗದ ಶೂಟಿಂಗ್ ಕ್ರೀಡೆಯಲ್ಲಿ ಭಾರತದ ತಂಡವು ಚಿನ್ನಕ್ಕೆ ಗುರಿಯಿಟ್ಟಿದೆ.

Advertisement

ಶುಕ್ರವಾರ ಐಶ್ವರಿ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ತಂಡವು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತಕ್ಕೆ ಶೂಟಿಂಗ್‌ ನಲ್ಲಿ ಇದು 15 ನೇ ಪದಕ ಮತ್ತು 7 ನೇ ಚಿನ್ನವಾಗಿದೆ.

ಭಾರತದ ತಂಡವು 1769 ಅಂಕ ಪಡೆದು ಅಮೆರಿಕದ ಈ ಹಿಂದಿನ ವಿಶ್ವದಾಖಲೆಯನ್ನು ಅಳಿಸಿತು. ಚೀನಾ ಎರಡನೇ ಸ್ಥಾನ ಪಡೆದರೆ, ರಿಪಬ್ಲಿಕ್ ಆಫ್ ಕೊರಿಯಾ ಮೂರನೇ ಸ್ಥಾನ ಪಡೆಯಿತು.

ಅರ್ಹತಾ ಹಂತದಲ್ಲಿ, ಸ್ವಪ್ನಿಲ್ ಮತ್ತು ಐಶ್ವರಿ ಇಬ್ಬರೂ 591 ಸ್ಕೋರ್‌ ಗಳೊಂದಿಗೆ ಹೊಸ ಏಷ್ಯನ್ ಮತ್ತು ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಅಖಿಲ್ 587 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಆದರೆ ವೈಯಕ್ತಿಕ ಫೈನಲ್‌ ನಲ್ಲಿ ಅಖಿಲ್ ಅವರು ಆಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಪ್ರತಿ ದೇಶದಿಂದ ಕೇವಲ ಇಬ್ಬರು ಶೂಟರ್‌ ಗಳು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next