ಹೊಸದಿಲ್ಲಿ: ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್, 42 ವರ್ಷ ಪ್ರಾಯದ ಡಿಂಗ್ಕೋ ಸಿಂಗ್ ಅವರು ನಿಧನರಾಗಿದ್ದಾರೆ. ಲಿವರ್ ಕ್ಯಾನ್ಸರ್ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಗುರುವಾರ ಅಸುನೀಗಿದರು.
ಬಾಕ್ಸರ್ ಡಿಂಗ್ಕೋ ಸಿಂಗ್ ನಿಧನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಸಂತಾಪ ಸೂಚಿಸಿದ್ದಾರೆ. ಡಿಂಗ್ಕೋ ಸಿಂಗ್ ನಿಧನ ವಾರ್ತೆ ಕೇಳಿ ಬೇಸರವಾಯಿತು. ಭಾರತವನ್ನು ಪ್ರತಿನಿಧಿಸಿದ ಅದ್ಭುತ ಬಾಕ್ಸರ್ ಗಳಲ್ಲಿ ಡಿಂಗ್ಕೋ ಸಿಂಗ್ ಕೂಡಾ ಒಬ್ಬರು. 1998ರ ಬ್ಯಾಂಕಾಂಕ್ ಏಶ್ಯನ್ ಗೇಮ್ಸ್ ನಲ್ಲಿ ಜಯಿಸಿದ ಚಿನ್ನದ ಪದಕ ಮುಂದೆ ದೇಶದಲ್ಲಿ ಬಾಕ್ಸಿಂಗ್ ಪರಂಪರೆ ಮುಂದುವರಿಯಲು ದೊಡ್ಡ ಸಾಧನವಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್: ಕೇನ್ ವಿಲಿಯಮ್ಸನ್ ಗೆ ರೆಸ್ಟ್
ಮಣಿಪುರ ರಾಜ್ಯದವರಾದ ಡಿಂಗ್ಕೋ ಸಿಂಗ್ ಅವರು 2017ರಿಂದ ಲಿವರ್ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದಾರೆ. ಅದಲ್ಲದೆ ಕಳೆದ ವರ್ಷ ಕೋವಿಡ್ 19 ಸೋಂಕು ಕೂಡಾ ತಾಗಿತ್ತು.
ಡಿಂಗ್ಕೋ ಸಿಂಗ್ ಅವರಿಗೆ 1998ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.