Advertisement

Asian Games: ಮಳೆಯ ಕಾರಣದಿಂದ ಫೈನಲ್ ವಿಳಂಬ; ಟಾಸ್ ಗೆದ್ದ ಭಾರತ

12:02 PM Oct 07, 2023 | Team Udayavani |

ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಈಗಾಗಲೇ ನೂರು ಪದಕಗಳನ್ನು ಪಡೆದು ಐತಿಹಾಸಿಕ ದಾಖಲೆ ಬರೆದಿರುವ ಭಾರತ ಇದೀಗ ಮತ್ತೊಂದು ಸ್ವರ್ಣದ ನಿರೀಕ್ಷೆಯಲ್ಲಿದೆ. ಕ್ರಿಕೆಟ್ ಫೈನಲ್ ತಲುಪಿರುವ ಭಾರತ ಪುರುಷರ ತಂಡವು ಅಫ್ಘಾನ್ ವಿರುದ್ಧ ಸ್ವರ್ಣ ಪದಕದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ನಡೆಸುತ್ತಿದೆ.

Advertisement

ಮಳೆಯ ಕಾರಣದಿಂದ ಪಂದ್ಯ ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಆರಂಭವಾಯಿತು. ಮಹಿಳಾ ಕ್ರಿಕೆಟ್ ನಲ್ಲಿ ಸ್ವರ್ಣ ಗೆದ್ದ ಭಾರತ ತಂಡವು ಪುರುಷರ ಕ್ರಿಕೆಟ್ ನಲ್ಲೂ ಸ್ವರ್ಣ ಗೆಲ್ಲುವ ಅವಕಾಶದಲ್ಲಿದೆ.

ತಂಡಗಳು:

ಅಫ್ಘಾನಿಸ್ತಾನ : ಜುಬೈದ್ ಅಕ್ಬರಿ, ಮೊಹಮ್ಮದ್ ಶಹಜಾದ್ (ವಿ.ಕೀ), ನೂರ್ ಅಲಿ ಜದ್ರಾನ್, ಶಾಹಿದುಲ್ಲಾ ಕಮಾಲ್, ಅಫ್ಸರ್ ಝಜೈ, ಕರೀಂ ಜನತ್, ಗುಲ್ಬದಿನ್ ನೈಬ್ (ನಾ), ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಫರೀದ್ ಅಹ್ಮದ್ ಮಲಿಕ್, ಜಹೀರ್ ಖಾನ್.

ಭಾರತ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ (ನಾ), ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್,  ಸಾಯಿ ಕಿಶೋರ್, ಅರ್ಷದೀಪ್ ಸಿಂಗ್

Advertisement
Advertisement

Udayavani is now on Telegram. Click here to join our channel and stay updated with the latest news.

Next