Advertisement

Asian Games; ಕ್ರಿಕೆಟ್‌ ಆಕರ್ಷಣೆ: ಸೆ. 27ರಂದು ಟಿ20 ಮಾದರಿಯ ಪಂದ್ಯಾವಳಿ ಆರಂಭ

11:50 PM Sep 20, 2023 | Team Udayavani |

ಹ್ಯಾಂಗ್‌ಝೂ: ಏಷ್ಯನ್‌ ಗೇಮ್ಸ್‌ನ ಈ ಬಾರಿಯ ವಿಶೇಷವೆಂದರೆ ಕ್ರಿಕೆಟ್‌ ಸ್ಪರ್ಧೆ. ಇದು ಪದಕ ಕ್ರೀಡೆಯಾಗಿ ಟಿ20 ಮಾದರಿಯಲ್ಲಿ ನಡೆಯಲಿದ್ದು, ಸೆ. 27ರಂದು ಪುರುಷರ ವಿಭಾಗದ‌ ಪಂದ್ಯ ಮೊದಲ್ಗೊಳ್ಳಲಿದೆ. ಅ. 7ರಂದು ಮೂರೂ ಪದಕಗಳು ಇತ್ಯರ್ಥಗೊಳ್ಳಲಿವೆ.
2010 ಮತ್ತು 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ಇತ್ತು. ಆದರೆ 2018ರಲ್ಲಿ ಇದನ್ನು ಕೈಬಿಡಲಾಯಿತು. ಇದೀಗ ಮತ್ತೆ ಚೀನ ಗೇಮ್ಸ್‌ನಲ್ಲಿ ಕ್ರಿಕೆಟ್‌ಗೆ ಪ್ರಾತಿನಿಧ್ಯ ನೀಡಲಾಗಿದೆ.

Advertisement

ನೇರ ಕ್ವಾರ್ಟರ್‌ ಫೈನಲ್‌

ಒಟ್ಟು 15 ತಂಡಗಳು ಕ್ರಿಕೆಟ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಲಿವೆ. ಭಾರತ, ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಇಲ್ಲಿನ ಪ್ರಮುಖ ತಂಡಗಳಾಗಿವೆ. ಆದರೆ ಇದು ಸ್ಟಾರ್‌ ಆಟಗಾರರನ್ನು ಒಳಗೊಂಡಿಲ್ಲ. ಇವರೆಲ್ಲ ವಿಶ್ವಕಪ್‌ ತಯಾರಿಯಲ್ಲಿ ತೊಡಗಿದ್ದು, ವಿವಿಧ ಸರಣಿಯಲ್ಲಿ ಆಡುತ್ತಿದ್ದಾರೆ.

ಈ ನಾಲ್ಕೂ ತಂಡಗಳಿಗೆ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ
ಪ್ರವೇಶ ನೀಡಲಾಗಿದೆ. ಉಳಿದ 11 ತಂಡಗಳು ಗ್ರೂಪ್‌ ಹಂತದಲ್ಲಿ ಸೆಣಸಲಿವೆ. ಇಲ್ಲಿ 4 ವಿಭಾಗಗಳಿದ್ದು, ಪ್ರತಿಯೊಂದು ವಿಭಾಗದಲ್ಲಿ ಅಗ್ರಸ್ಥಾನ ಪಡೆದ ತಂಡ ಕ್ವಾರ್ಟರ್‌ ಫೈನಲ್‌ಗೆ ಏರಲಿದೆ.

“ಎ’ ವಿಭಾಗದಲ್ಲಿ ಅಫ್ಘಾನಿಸ್ಥಾನ, ಮಂಗೋಲಿಯ; “ಬಿ’ ವಿಭಾಗದಲ್ಲಿ ಕಾಂಬೋಡಿಯ, ಜಪಾನ್‌, ನೇಪಾಲ; “ಸಿ’ ವಿಭಾಗದಲ್ಲಿ ಹಾಂಕಾಂಗ್‌, ಸಿಂಗಾಪುರ, ಥಾಯ್ಲೆಂಡ್‌; “ಡಿ’ ವಿಭಾಗದಲ್ಲಿ ಮಲೇಷ್ಯಾ, ಬಹ್ರೈನ್‌, ಮಾಲ್ಡೀವ್ಸ್‌ ತಂಡಗಳಿವೆ.

Advertisement

ವನಿತಾ ವಿಭಾಗದ ಸ್ಪರ್ಧೆಗಳು ಬುಧವಾರದಿಂದಲೇ ಮೊದಲ್ಗೊಂಡಿದ್ದು, ಸೆ. 25ರ ತನಕ ಸಾಗಲಿದೆ. ಇಲ್ಲಿಯೂ ಅಗ್ರ 4 ತಂಡಗಳಾದ ಭಾರತ, ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ನೇರ ಕ್ವಾರ್ಟರ್‌ ಫೈನಲ್‌ ಪ್ರವೇಶ ಲಭಿಸಿದೆ. ಉಳಿದಂತೆ “ಎ’ ವಿಭಾಗದಲ್ಲಿ ಇಂಡೋನೇಷ್ಯಾ, ಮಂಗೋಲಿಯ; “ಬಿ’ ವಿಭಾಗದಲ್ಲಿ ಹಾಂಕಾಂಗ್‌ ಮತ್ತು ಮಲೇಷ್ಯಾ ತಂಡಗಳಿವೆ. ರೌಂಡ್‌ ರಾಬಿನ್‌ ಪಂದ್ಯ ಹಾಗೂ ಕ್ವಾರ್ಟರ್‌ ಫೈನಲ್‌ ಕ್ವಾಲಿಫೈಯರ್‌ ಪಂದ್ಯಗಳ ಬಳಿಕ 8 ತಂಡಗಳ ವೇಳಾಪಟ್ಟಿ ಅಂತಿಮಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next