Advertisement
ಇದರೊಂದಿಗೆ ಭಾರತ 86 ವರ್ಷಗಳ ಗೆಲುವಿನ ದಾಖಲೆಯನ್ನು ಮುರಿಯಿತು. 1932ರ ಒಲಿಂಪಿಕ್ಸ್‌ನಲ್ಲಿ ಯುಎಸ್‌ಎ ವಿರುದ್ಧ 24-1 ಅಂತರದ ಗೆಲುವು ಸಾಧಿಸಿದ್ದು ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯವನ್ನು 17-0 ಅಂತರದಿಂದ ಹಿಮ್ಮೆಟ್ಟಿಸಿತ್ತು. ಇದರೊಂದಿಗೆ ಕೇವಲ 2 ಲೀಗ್ ಪಂದ್ಯಗಳಲ್ಲಿ ಶ್ರೀಜೇಶ್ ಪಡೆ 43 ಗೋಲು ಬಾರಿಸಿ ಮೆರೆಯಿತು!
ಭಾರತದ ಪರ ರೂಪಿಂದರ್ ಪಾಲ್ ಸಿಂಗ್ ಸರ್ವಾಧಿಕ 5 ಗೋಲು ಬಾರಿಸಿದರು. ಹರ್ಮನ್‌ಪ್ರೀತ್ ಸಿಂಗ್ 4, ಆಕಾಶ್‌ದೀಪ್ ಸಿಂಗ್ 3, ಲಲಿತ್ ಉಪಾಧ್ಯಾಯ, ವರುಣ್ ಕುಮಾರ್ ಮತ್ತು ಮನ್‌ಪ್ರೀತ್ ಸಿಂಗ್ ತಲಾ 2 ಗೋಲು ಹೊಡೆದರು. ಉಳಿದ ಗೋಲು ಸಿಡಿಸಿದವರು ಸುನೀಲ್ ಎಸ್.ವಿ., ಸುರೇಂದರ್ ಕುಮಾರ್, ವಿವೇಕ್ ಸಾಗರ್ ಪ್ರಸಾದ್, ಅಮಿತ್ ರೋಹಿದಾಸ್, ಚಿಂಗ್ಲೆನ್ಸನ ಕಾಂಗುಜಮ್, ಮನ್‌ದೀಪ್ ಸಿಂಗ್, ಸಿಮ್ರನ್‌ಜಿàತ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್. ವಿರಾಮದ ವೇಳೆ ಭಾರತ 14-0 ಗೋಲುಗಳಿಂದ ಮುಂದಿತ್ತು.