Advertisement

ಡಬಲ್‌ ಒಲಿಂಪಿಯನ್‌ಗೆ ಸುಶೀಲ್‌ಗೆ ಆಘಾತ

06:40 AM Aug 20, 2018 | Team Udayavani |

ಜಕಾರ್ತಾ: ಏಷ್ಯನ್‌ ಗೇಮ್ಸ್‌ನ ಕುಸ್ತಿ ಸ್ಪರ್ಧೆಯ ಮೊದಲ ದಿನವೇ ಭಾರತ ಆಘಾತ ಅನುಭವಿಸಿದೆ. ಪದಕ ನಿರೀಕ್ಷೆಯ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತ ಸುಶೀಲ್‌ ಕುಮಾರ್‌ 74 ಕೆ.ಜಿ. ವಿಭಾಗದ ಅರ್ಹತಾ ಸುತ್ತಿನಲ್ಲಿಯೇ ಬಹರೆùನ್‌ನ ಆ್ಯಡಂ ಬತಿರೋವ್‌ ಕೈಯಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. ಮೊದಲ ಅವಧಿಯಲ್ಲಿ ಸುಶೀಲ್‌ 2-1 ಮುನ್ನಡೆ ಸಾಧಿಸಿದ್ದರು. ಆದರೆ ಆಬಳಿಕ ಉಗ್ರವಾಗಿ ಎರಗಿದ ಬತಿರೋವ್‌ 5-3 ಅಂತರದಿಂದ ಗೆದ್ದು ಸಂಭ್ರಮಿಸಿದರು. ದ್ವಿತೀಯ ಅವಧಿಯಲ್ಲಿ ಸುಶೀಲ್‌ಗೆ ಮುನ್ನಡೆಗೆ ಎರಡು ಅವಕಾಶ ವಿದ್ದರೂ ಲಾಭ ಪಡೆಯಲು ಅವರಿಂದ ಸಾಧ್ಯವಾಗಿರಲಿಲ್ಲ. ಆದರೆ ಬತಿರೋವ್‌ ತನ್ನ ಅವಕಾಶದಲ್ಲಿ ಸಮರ್ಥವಾಗಿ ಬಳಸಿಕೊಂಡು ಸುಶೀಲ್‌ ಅವರನ್ನು ಕೆಡಹಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next