Advertisement

ಹಾಕಿ: ಬಂಗಾರವೇ ಭಾರತದ ಗುರಿ

06:15 AM Aug 20, 2018 | |

ಜಕಾರ್ತಾ: ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಪ್ರವೇಶದ ಗುರಿ ಇರಿಸಿಕೊಂಡಿರುವ ಭಾರತದ ಪುರುಷರ ಹಾಕಿ ತಂಡ ಸೋಮವಾರ ಏಶ್ಯಾಡ್‌ನ‌ಲ್ಲಿ ಮೊದಲ ಲೀಗ್‌ ಪಂದ್ಯವನ್ನು ಆಡಲಿದೆ. ಅಗ್ರ ಶ್ರೇಯಾಂಕದ ಭಾರತ ತಂಡದ ಎದುರಾಳಿ ದುರ್ಬಲ ಇಂಡೋನೇಶ್ಯ.

Advertisement

ಹಾಲಿ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ಭಾರತ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದರೆ, ಇಂಡೋನೇಶ್ಯ ಇನ್ನೂ ವಿಶ್ವ ಹಾಕಿ ಭೂಪಟದಲ್ಲಿ ಗುರುತಿಸಿಕೊಂಡಿಲ್ಲ. ಹಾಗೆ ನೋಡಹೋದರೆ ಪ್ರಬಲ ಭಾರತಕ್ಕೆ ಲೀಗ್‌ ಹಂತದ ಯಾವ ಎದುರಾಳಿಯೂ ಸಾಟಿಯಾಗದು. “ಎ’ ಗುಂಪಿನಲ್ಲಿರುವ ಪಿ.ಆರ್‌. ಶ್ರೀಜೇಶ್‌ ಬಳಗ ಕೊರಿಯಾ (14), ಜಪಾನ್‌ (16), ಶ್ರೀಲಂಕಾ (38) ಹಾಂಕಾಂಗ್‌ ಚೀನ (45ನೇ ರ್‍ಯಾಂಕಿಂಗ್‌).

ಆದರೆ ನಾಕೌಟ್‌ನಲ್ಲಿ ಭಾರತ ನಿಜವಾದ ಸ್ಪರ್ಧೆಯನ್ನು ಕಾಣಬೇಕಾಗುತ್ತದೆ. ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ (13) ಅಥವಾ ಮಲೇಶ್ಯ (12) ಭಾರತದ ಎದುರಾಳಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕವಿಲ್ಲದೆ ಮರಳಿದ್ದ ಭಾರತಕ್ಕೆ ಈ ಸಂಕಟವನ್ನು ನಿವಾರಿಸಿಕೊಳ್ಳಲು ಏಶ್ಯಾಡ್‌ ಪದಕವೊಂದು ಅನಿವಾರ್ಯ. ಇದು ಚಿನ್ನವಾದರೆ ತೂಕ ಜಾಸ್ತಿ. ಈವರೆಗಿನ ಏಶ್ಯಾಡ್‌ ಇತಿಹಾಸದಲ್ಲಿ ಭಾರತೀಯ ಹಾಕಿ ತಂಡ ಪದಕವಿಲ್ಲದೆ ವಾಪಸಾದದ್ದು ಒಮ್ಮೆ ಮಾತ್ರ. ಅದು 2006ರ ದೋಹಾ ಪಂದ್ಯಾವಳಿಯಲ್ಲಿ ಅನುಭವಿಸಿದ ಸಂಕಟವಾಗಿತ್ತು.

“ಏಶ್ಯಾಡ್‌ನ‌ಲ್ಲಿ ಚಿನ್ನ ಗೆದ್ದರೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ತಂಡವೆಂಬ ಹೆಗ್ಗಳಿಕೆ ಭಾರತದ್ದಾಗಲಿದೆ. ಈ ಅವಕಾಶವನ್ನು ಯಾವ ಕಾರಣಕ್ಕೂ ಕೈಚೆಲ್ಲಬಾರದು’ ಎಂದಿದ್ದಾರೆ ಕೋಚ್‌ ಹರೇಂದ್ರ ಸಿಂಗ್‌. ಜಕಾರ್ತಾದಲ್ಲಿ ಚಿನ್ನ ಗೆದ್ದರೆ ಭಾರತ ಮೊದಲ ಸಲ ಏಶ್ಯಾಡ್‌ ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಂಡ ಹಿರಿಮೆಗೂ ಪಾತ್ರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next