Advertisement

ಏಶ್ಯಾಡ್‌ ಕಬಡ್ಡಿ: ಭಾರತ ತಂಡ ಪ್ರಕಟ

06:00 AM Jul 10, 2018 | Team Udayavani |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಕೂಟಕ್ಕೆ ಭಾರತ ಕಬಡ್ಡಿ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ ತಂಡಕ್ಕೆ ಅಜಯ್‌ ಠಾಕೂರ್‌ ನಾಯಕರಾಗಿ ಆಯ್ಕೆ ಯಾಗಿದ್ದಾರೆ. ಅಭಿಲಾಷಾ ಮ್ಹಾತ್ರೆ ಅನು ಪಸ್ಥಿತಿಯಲ್ಲಿ ಭಾರತ ವನಿತಾ ತಂಡದ ನಾಯಕಿ ಯಾರು ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. 

Advertisement

ಮಹಿಳಾ ತಂಡದಲ್ಲಿ ಕರ್ನಾಟಕದ ಏಕೈಕ ಆಟಗಾರ್ತಿಯಾಗಿ ಉಷಾರಾಣಿ ಆಯ್ಕೆಯಾದರೆ, ಪುರುಷರ ತಂಡದಲ್ಲಿ ಕರ್ನಾಟಕ ಮೂಲದ ರಿಷಾಂಕ್‌ ದೇವಾಡಿಗ ಸ್ಥಾನ ಸಂಪಾದಿಸಿದ್ದಾರೆ. ಈವರೆಗೆ ಏಶ್ಯಾಡ್‌ನ‌ಲ್ಲಿ 9 ಸಲ ಕಬಡ್ಡಿ ಸ್ಪರ್ಧೆ ಆಯೋಜಿಸಲಾಗಿದ್ದು, ಎಲ್ಲದರಲ್ಲೂ ಭಾರತ ಚಾಂಪಿಯನ್‌ ಆಗಿದೆ.

ಭಾರತ ತಂಡಗಳು
ಪುರುಷರ ತಂಡ:
ಅಜಯ್‌ ಠಾಕೂರ್‌, ಗಿರೀಶ್‌ ಮಾರುತಿ ಎನ್ನಾìಕ್‌, ದೀಪಕ್‌, ಮೋಹಿತ್‌ ಚಿಲ್ಲಾರ್‌, ಸಂದೀಪ್‌, ಪ್ರದೀಪ್‌, ರಿಷಾಂಕ್‌ ದೇವಾಡಿಗ, ಮೋನು ಗೋಯತ್‌, ರೋಹಿತ್‌ ಕುಮಾರ್‌, ರಾಜುಲಾಲ್‌ ಚೌಧರಿ, ಮಲ್ಲೇಶ್‌ ಗಂಗಾಧರಿ, ರಾಹುಲ್‌ ಚೌಧರಿ, ಅಮಿತ್‌ ನಗರ್‌, ಮಣೀಂದರ್‌ ಸಿಂಗ್‌.

ಮಹಿಳಾ ತಂಡ: ಸಾಕ್ಷಿ ಕುಮಾರಿ, ಕವಿತಾ, ಪ್ರಿಯಾಂಕಾ, ಮನ್‌ಪ್ರೀತ್‌ ಕೌರ್‌, ಪಾಯಲ್‌ ಚೌಧರಿ, ರೀತು ನೆಗಿ, ಸೋನಾಲಿ ವಿಷ್ಣು ಶಿಂಗಟೆ, ಸಯಾಲಿ ಸಂಜಯ್‌, ರಣದೀಪ್‌ ಕೌರ್‌, ಶಾಲಿನಿ ಪಾಠಕ್‌, ಉಷಾರಾಣಿ, ಮಧು, ಶಮಾ ಪ್ರವೀಣ್‌.

Advertisement

Udayavani is now on Telegram. Click here to join our channel and stay updated with the latest news.

Next