Advertisement

Asian ಡಬಲ್ಸ್‌ ಸ್ಕ್ವಾಶ್‌: ಅಭಯ್‌ಗೆ ಅವಳಿ ಚಿನ್ನ

12:39 AM Jul 08, 2024 | Team Udayavani |

ಜೋಹರ್‌ (ಮಲೇಷ್ಯಾ): ಏಷ್ಯನ್‌ ಡಬಲ್ಸ್‌ ಸ್ಕ್ವಾಶ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಯ್‌ ಸಿಂಗ್‌ ಅವಳಿ ಚಿನ್ನ ಜಯಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ವೇಲವನ್‌ ಸೆಂಥಿಲ್‌ಕುಮಾರ್‌ ಜತೆಗೂಡಿ ಮೊದಲ ಚಿನ್ನ ಗೆದ್ದರು. ಇಲ್ಲಿ ಮಲೇಷ್ಯಾದ ಓಂಗ್‌ ಸಾಯ್‌ ಹಂಗ್‌ ಮತ್ತು ಸಯಾಫಿಕ್‌ ಕಮಾಲ್‌ ವಿರುದ್ಧ 11-4, 11-5 ಅಂತರದ ಗೆಲುವು ಒಲಿಯಿತು.

Advertisement

ಬಳಿಕ ಜೋಶ್ನಾ ಚಿನ್ನಪ್ಪ ಜತೆಗೂಡಿ ಮಿಶ್ರ ಡಬಲ್ಸ್‌ನಲ್ಲೂ ಚಿನ್ನ ಜಯಿಸಿದರು. ಇಲ್ಲಿ ಹಾಂಕಾಂಗ್‌ನ ಟಾಂಗ್‌ ತ್ಸು ವಿಂಗ್‌-ಟಾಂಗ್‌ ಮಿಂಗ್‌ ಹೋಂಗ್‌ ವಿರುದ್ಧ 11-8, 10-11, 11-5 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next