ಹೊಸದಿಲ್ಲಿ: ಭಾರತ 8ನೇ ಸಲ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್ ಎನಿಸಿದ್ದು ವಿಶೇಷ ಸಾಧನೆ ಎಂದು ಭಾವಿಸಬೇಕಿಲ್ಲ, ತಂಡ ಇದಕ್ಕೂ ಮಿಗಿಲಾದ ಸಾಧನೆಗೈಯಬೇಕಿದೆ, ಅದು 2023ರ ಏಶ್ಯ ಕಪ್ ಪಂದ್ಯಾವಳಿಗೆ ಅರ್ಹತೆ ಸಂಪಾದಿಸುವುದು ಎಂಬುದಾಗಿ ಕೋಚ್ ಐಗರ್ ಸ್ಟಿಮ್ಯಾಕ್ ಹೇಳಿದ್ದಾರೆ.
“ನಾನು ಸ್ಯಾಫ್ ಗೆಲುವನ್ನು ದೊಡ್ಡ ಯಶಸ್ಸು ಎಂದು ಭಾವಿಸುವುದಿಲ್ಲ. ಇದು ನಿರೀಕ್ಷಿತ. ನಾವು ಇದರಲ್ಲಿ ಪ್ರಭುತ್ವ ಸಾಧಿಸುತ್ತ ಬಂದೆವು, ಕೊನೆಗೆ ಚಾಂಪಿಯನ್ ಕೂಡ ಆದೆವು. ಇಲ್ಲಿಂದ ನಾವು ಇನ್ನಷ್ಟು ಪ್ರಗತಿ ಸಾಧಿಸುತ್ತ ಹೋಗಬೇಕಿದೆ’ ಎಂಬುದಾಗಿ ಸ್ಟಿಮ್ಯಾಕ್ ಹೇಳಿದರು.
ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬಂದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.”ಆರಂಭದ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಾಗ ನಮ್ಮ ಮುಂದೆ ಕಠಿನ ಪರಿಸ್ಥಿತಿ ಇತ್ತು. ಆದರೆ ನಮ್ಮ ಪ್ರಯತ್ನದಲ್ಲೇನೂ ದೋಷಗಳಿರಲಿಲ್ಲ. ಹೀಗಾಗಿ ಕೂಡಲೇ ಲಯ ಕಂಡುಕೊಂಡೆವು’ ಎಂದರು.
ಇದನ್ನೂ ಓದಿ:ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’
ಇದೀಗ ದುಬಾೖ ತಲುಪಿರುವ ಸ್ಟಿಮ್ಯಾಕ್, ಅಂಡರ್-23 ತಂಡದ ಕೋಚಿಂಗ್ ಜವಾಬ್ದಾರಿ ವಹಿಸಲಿ ದ್ದಾರೆ. 2022ರ ಏಶ್ಯನ್ ಯು-23 ಅರ್ಹತಾ ಪಂದ್ಯಾವಳಿ ಅ. 25ರಿಂದ 31ರ ತನಕ ಯುಎಇಯಲ್ಲಿ ನಡೆಯಲಿದೆ.