Advertisement
ಟೋಕಿಯೊ ಒಲಿಂಪಿಕ್ಸ್ ಅಭಿಯಾನದ ಬಳಿಕ ತನ್ನ ಮೊದಲ ಪಂದ್ಯಾವಳಿಯನ್ನು ಆಡುತ್ತಿರುವ ಭಾರತ, ಪಂದ್ಯದ ನಾಲ್ಕನೇ ನಿಮಿಷದಲ್ಲೇ ಖಾತೆ ತೆರೆಯಿತು. ಲಲಿತ್ ಉಪಾಧ್ಯಾಯ ಗೋಲು ಬಾರಿಸಿದರು. ಬೆನ್ನಲ್ಲೇ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ 18ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 2-0 ಮುನ್ನಡೆ ತಂದು ಕೊಟ್ಟರು. ಆದರೆ ಇದನ್ನು ಉಳಿಸಿಕೊಳ್ಳಲು ಮಾತ್ರ ಭಾರತದಿಂದ ಸಾಧ್ಯವಾಗಲಿಲ್ಲ.
0-2 ಹಿನ್ನೆಡೆಯಲ್ಲಿದ್ದ ಕೊರಿಯಾ ತಿರುಗಿ ಬಿದ್ದು ಪಂದ್ಯವನ್ನು ಸಮಬಲಕ್ಕೆ ತರಲು ಯಸ್ವಿಯಾಯಿತು. 41ನೇ ನಿಮಿಷದಲ್ಲಿ ಜೋಂಗ್ ಹ್ಯೂನ್ ಮತ್ತು 46ನೇ ನಿಮಿಷದಲ್ಲಿ ಸುಂಗ್‌ಯುನ್ ಕಿಮ್ ಗೋಲು ಬಾರಿಸಿದರು.
ಬಳಿಕ ಇತ್ತಂಡಗಳೂ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟವು. ಉಭಯ ತಂಡಗಳಿಗೆ ಗೋಲು ಬಾರಿಸುವ ಅವಕಾಶವಿದ್ದರೂ ಇದು ವಿಫಲಗೊಂಡಿತು. ಕಳೆದ ಆವೃತ್ತಿಯ ಮುಖಾಮುಖೀಯಲ್ಲೂ ಭಾರತ-ಕೊರಿಯಾ ಡ್ರಾ ಸಾಧಿಸಿದ್ದನ್ನು (1-1) ನೆನಪಿಸಿಕೊಳ್ಳಬಹುದು. ಭಾರತವಿನ್ನು ಅತಿಥೇಯ ಬಾಂಗ್ಲದೇಶವನ್ನು ಬುಧವಾರದ ಪಂದ್ಯದಲ್ಲಿ ಎದುರಿಸಲಿದೆ.
Related Articles
Advertisement