Advertisement
ಇದುವರೆಗೆ 49 ಕೆಜಿ ವಿಭಾಗದಲ್ಲಿ ಸ್ಫರ್ದಿಸುತ್ತಿದ್ದ ಅಮಿತ್ ಈ ಬಾರಿ 52 ಕೆಜಿ ವಿಭಾಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಇಲ್ಲಿ ಅಮಿತ್ ಜಯ ಗಳಿಸಿದರೆ ಚೊಚ್ಚಲ ಪಂದ್ಯದಲ್ಲೇ ಚಿನ್ನ ಗೆದ್ದ ದಾಖಲೆ ನಿರ್ಮಿಸಿದಂತಾಗುತ್ತದೆ. ಕಳೆದ ತಿಂಗಳು “ಸ್ಟ್ರಾಂಜಾ ಮೆಮೋರಿಯಲ್’ ಕೂಟದ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು ಮಾರ್ಚ್ ತಿಂಗಳ ಆರಂಭದಲ್ಲಿ ಹೊಸ ತೂಕದ ತರಬೇತಿ ಪಡೆದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದ ಸ್ಪರ್ಧೆ ಇಲ್ಲದ ಕಾರಣ ಅಮಿತ್ 52 ಕೆಜಿಗೆ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ.
ಇತ್ತೀಚಿಗೆ ಫಿನ್‌ಲ್ಯಾಂಡ್ ನಲ್ಲಿ ನಡೆದ “ಗೀಬೀ ಬಾಕ್ಸಿಂಗ್’ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಶಿವ ಥಾಪ ಸತತ 4ನೇ ಪದಕ ಗೆಲ್ಲುವ ತವಕದಲ್ಲಿದ್ದಾರೆ. ಇದಕ್ಕೂ ಮುನ್ನ ಅವರು 2013ರಲ್ಲಿ ಚಿನ್ನ, 2015ರಲ್ಲಿ ಕಂಚು ಹಾಗೂ 2017ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 49 ಕೆಜಿ ವಿಭಾಗದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಇರಾನ್‌ನಲ್ಲಿ ನಡೆದ ಮಕ್ರಾನ್ ಕಪ್ ಕೂಟದಲ್ಲಿ ಚಿನ್ನ ಗೆದ್ದ ದೀಪಕ್ ಸಿಂಗ್ ಸ್ಪರ್ಧೆಸಲಿದ್ದಾರೆ. “ಒಲಿಂಪಿಕ್ಸ್‌ನ ತೂಕ ವಿಭಾಗದಂತೆ ಈ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಯಾರು ಚಿನ್ನ ಅಥವಾ ಬೆಳ್ಳಿ ಪದಕ ಜಯಿಸುತ್ತಾರೋ ಅವರು ಮುಂದಿನ ವಿಶ್ವ ಚಾಂಪಿಯನ್‌ಶಿಪ್ ಕೂಟಕ್ಕೆ ನೇರ ಆಯ್ಕೆಯಾಗಲಿದ್ದಾರೆ’ ಎಂದು ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಸಿ.ಎ. ಕುಟ್ಟಪ್ಪ ಹೇಳಿದ್ದಾರೆ.ಗೀಬೀ ಕೂಟದಲ್ಲಿ ಚಿನ್ನ ಗೆದ್ದ ಕವೀಂದರ್ ಸಿಂಗ್ 56 ಕೆಜಿ ವಿಭಾಗದಲ್ಲಿ ಸ್ಪರ್ಧೆಸಿದರೆ, ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ +91 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
Related Articles
ದೀಪಕ್ (46 ಕೆಜಿ), ಅಮಿತ್ ಪಂಘಲ್ (52 ಕೆಜಿ), ಕವೀಂದರ್ ಸಿಂಗ್ ಬಿಷ್ಟ್ (56 ಕೆಜಿ), ಶಿವ ಥಾಪ (60 ಕೆಜಿ), ರೋಹಿತ್ (64 ಕೆಜಿ), ಆಶಿಷ್ (69 ಕೆಜಿ), ಆಶಿಷ್ ಕುಮಾರ್ (75 ಕೆಜಿ), ಬೃಜೇಶ್ ಯಾದವ್ (81 ಕೆಜಿ), ನಮನ್ ತನ್ವಾರ್ (91 ಕೆಜಿ), ಸತೀಶ್ ಕುಮಾರ್ (+91ಕೆಜಿ).
Advertisement