Advertisement
ಮಂಗಳವಾರ ನಡೆದ ಪಂದ್ಯದಲ್ಲಿ 25ರ ಹರೆಯದ ಶಿವ ಥಾಯ್ಲೆಂಡ್‌ನ ರುಜಾಕ್ರನ್ ಜಂಟ್ರಾಂಗ್ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿ ಸೆಮಿಫೈನಲಿಗೆ ಕಾಲಿಟ್ಟರು. ಈ ಗೆಲುವಿನ ಮೂಲಕ ಶಿವ ಈ ಕೂಟದಲ್ಲಿ ಸತತ 4ನೇ ಪದಕ ಖಾತ್ರಿಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಕಜಕೀಸ್ಥಾನದ ಜಕೀರ್ ಸಫುಲ್ಲಿನ್ ಅವರನ್ನು ಎದುರಿಸಲಿದ್ದಾರೆ. ಈ ಪ್ರತಿಷ್ಠಿತ ಕೂಟದ ಹಿಂದಿನ ಆವೃತ್ತಿಗಳಲ್ಲಿ ಥಾಪ ಚಿನ್ನ (2013), ಕಂಚು ( 2015) ಮತ್ತು ಬೆಳ್ಳಿ (2017)ಪದಕ ಗೆದ್ದು ಸಂಭ್ರಮಿಸಿದ್ದರು.
ವನಿತಾ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಸರಿತಾ ದೇವಿ ದಶಕಗಳ ಅನಂತರ ಸೆಮಿಫೈನಲ್ ಪ್ರವೇಶಿಸಿದರು. ಅವರು 2010ರಲ್ಲಿ ಈ ಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು. ಸರಿತಾ ಅವರು ಕಜಕೀಸ್ಥಾನ ರಿಮ್ಮಾ ವಾಲೊಸ್ಸೆಂಕೊ ವಿರುದ್ಧ ಗೆದ್ದು ಪದಕದ ಸುತ್ತಿಗೆ ಪ್ರವೇಶಿಸಿದರು. ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತರಾದ ಮನೀಷಾ (54 ಕೆ.ಜಿ.) ಮತ್ತು ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಜರೀನಾ (51 ಕೆ.ಜಿ.) ಮತ್ತು ಮಾಜಿ ರಾಷ್ಟ್ರೀಯ ಚಾಂಪಿಯನ್ ಸಿಮ್ರಾನ್‌ಜಿàತ್ ಕೌರ್ ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದು ಕನಿಷ್ಠ ಕಂಚಿನ ಪದಕ ಖಚಿತ ಪಡಿಸಿದ್ದಾರೆ. ಪುರುಷರ 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಅನೀಶ್ ಕುಮಾರ್ ಕಿರ್ಗಿಸ್ಥಾನದ ಓಮರ್ಬೆಕ್ ಉಲು ಬೆಹಿjಗಿಟ್ ವಿರುದ್ಧ ಅವಿರೋಧ ತೀರ್ಪಿನಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು. ಉಳಿದಂತೆ ಸತೀಶ್ ಕುಮಾರ್ (+91 ಕೆ.ಜಿ.) ಮತ್ತು ಅನೀಶ್ (69 ಕೆ.ಜಿ.) ಕೂಡ ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ.
Related Articles
ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ನಮನ್ ತನ್ವಾರ್ (91 ಕೆ.ಜಿ.),
ವನಿತೆಯರ 75 ಕೆ.ಜಿ. ಸ್ಪರ್ಧೆಯಲ್ಲಿ ನುಪುರ್ ಸೋತು ಟೂರ್ನಿಯಿಂದ ಹೊರನಡೆದರು.
Advertisement