ನವದೆಹಲಿ: ಸಂಘಟಿತ ಹೋರಾಟ ಪ್ರದರ್ಶಿಸಿದ ಭಾರತ ತಂಡ ಮಹಿಳಾ ಫಿಬಾ ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಫಿಜಿ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೆಮೀಸ್‌ನಲ್ಲಿ ಭಾರತ ತಂಡ ಶುಕ್ರವಾರ ಲೆಬೆನಾನ್ ಸವಾಲನ್ನು ಎದುರಿಸಲಿದೆ.
ಗುರುವಾರ ಉದ್ಯಾನ ನಗರಿಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ “ಬಿ’ ಗುಂಪಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 93-51 ಅಂಕದಿಂದ ಫಿಜಿ ತಂಡವನ್ನು ಸೋಲಿಸಿತು. ಪಂದ್ಯದ ಆರಂಭದಿಂದ ಭಾರತೀಯ ಆಟಗಾರ್ತಿ ಯರು ಆಕ್ರಮಣಕಾರಿ ಆಟ ಆಡುತ್ತಾ ಸಾಗಿದರು.
ಇದರ ಫಲವಾಗಿ ಭಾರತ ನಿರಂತರವಾಗಿ ಅಂಕವನ್ನು ಹೆಚ್ಚಿಸಿ ಕೊಳ್ಳುತ್ತಾ ಸಾಗಿತು. ಅಂತಿಮವಾಗಿ ಭಾರತ ಭರ್ಜರಿ ಜಯ ದಾಖಲಿಸುವಲ್ಲಿ ಯಶಸ್ವಿಯಾಯಿತು.
ಉಳಿದಂತೆ “ಬಿ’ ಗುಂಪಿನ ಕ್ವಾರ್ಟರ್ ಫೈನಲ್‌ಪಂದ್ಯದಲ್ಲಿ ಕಜಕೀಸ್ತಾನ್ ಮತ್ತು ಉಜ್ಬೇಕಿಸ್ತಾನ್ ತಂಡಗಳು ಸೆಮೀಸ್ ತಲುಪಿಗೆ. ಈ ಎರಡೂ ತಂಡಗಳು ಶುಕ್ರವಾರ ನಡೆಯಲಿರುವ ಸೆಮೀಸ್‌ನಲ್ಲಿ ಮುಖಾಮುಖೀಯಾಗಲಿವೆ. “ಎ’ ಗುಂಪಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಚೀನಾ ತಂಡ ಫಿಲಿಪೀನ್ಸ್ ತಂಡವನ್ನು ಸೋಲಿಸಿ ಸೆಮೀಸ್ ತಲುಪಿದೆ. ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ತಂಡ ಚೀನೀ ಥೈಪೆ ವಿರುದ್ಧ ಗೆದ್ದು ಸೆಮೀಸ್ ತಲುಪಿದೆ. ಹೀಗಾಗಿ ಸೆಮಿಫೈನಲ್ ನಲ್ಲಿ ಚೀನಾ-ಜಪಾನ್ ತಂಡಗಳು ಹೋರಾ ಡಲಿವೆ. ಎರಡೂ ಬಲಾಡ್ಯ ತಂಡಗಳಾಗಿರುವುದರಿಂದ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದಾಗಿದೆ. ಉಳಿದಂತೆ ಕೊರಿಯಾ-ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಮುಖಾಮುಖೀಯಾಗಲಿವೆ.