Advertisement

ಏಶ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಸಮೀರ್‌, ಸಿಂಧು, ಸೈನಾ ಕ್ವಾರ್ಟರ್‌ ಫೈನಲ್‌ಗೆ

09:52 AM Apr 26, 2019 | Team Udayavani |

ವುಹಾನ್‌ (ಚೀನ): “ಏಶ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌’ನಲ್ಲಿ ಭಾರತೀಯರ ಓಟ ಮುಂದುವರಿದಿದೆ. ಸೈನಾ ನೆಹ್ವಾಲ್‌, ಪಿ.ವಿ. ಸಿಂಧು ಮತ್ತು ಸಮೀರ್‌ ವರ್ಮ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಗುರುವಾರ ನಡೆದ ದ್ವಿತೀಯ ಸುತ್ತಿನ ಮೊದಲ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಕೇವಲ 33 ನಿಮಿಷಗಳಲ್ಲಿ ಇಂಡೋನೇಶ್ಯದ ಚೊಯಿರುನ್ನಿಸಾ ವಿರುದ್ಧ 21-15, 21-19ರಿಂದ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಸಿಂಧು ಶ್ರೇಯಾಂಕ ರಹಿತ ಆಟಗಾರ್ತಿ, ಚೀನದ ಕಿಯಾ ಯನ್ಯಾನ್‌ ಅವರನ್ನು ಎದುರಿಸಲಿದ್ದಾರೆ.

ವನಿತಾ ಸಿಂಗಲ್ಸ್‌ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಕೊರಿಯಾದ ಕಿಮ್‌ ಗಾ ಇಯುನ್‌ ಅವರನ್ನು 21-13, 21-13 ನೇರ ಗೇಮ್‌ಗಳಿಂದ ಸೋಲಿಸಿದರು. ಈ ಪಂದ್ಯ ಕೇವಲ 38 ನಿಮಿಷಗಳಲ್ಲಿ ಕೊನೆಗೊಂಡಿತು. ಸೈನಾ ಮುಂದಿನ ಎದುರಾಳಿ ಜಪಾನಿನ ಅಕಾನೆ ಯಮಾಗುಚಿ.

ಭಾರತದ ಮಿಕ್ಸೆಡ್‌ ಡಬಲ್ಸ್‌ ಜೋಡಿ ಉತ್ಕರ್ಷ್‌ ಅರೋರ್‌- ಕರಿಶ್ಮಾ ವಾಡ್ಕರ್‌ ಇಂಡೋನೇಶ್ಯದ ಹಫೀಜ್‌ ಫೈಸಲ್‌-ಗ್ಲೋರಿಯಾ ಇಮಾನ್ಯುಯೆಲ್‌ ವಿರುದ್ಧ 10-21, 15-21 ಗೇಮ್‌ಗಳಿಂದ ಸೋತಿತು. ಇನ್ನೊಂದು ಮಿಕ್ಸೆಡ್‌ ಡಬಲ್ಸ್‌ ಜೋಡಿ ವೆಂಕಟ್‌ ಗೌರವ್‌ ಪ್ರಸಾದ್‌-ಜೂಹಿ ದೇವಾಂಗನ್‌ ಚೀನದ ಯಿಲ್ಯು ವಾಂಗ್‌-ಡಾಂಗಿ³ಂಗ್‌ ಹೌಂಗ್‌ ವಿರುದ್ಧ 10-21, 9-21ರಿಂದ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next