Advertisement
45 ದೇಶಗಳ 800ಕ್ಕಿಂತ ಹೆಚ್ಚಿನ ಆ್ಯತ್ಲೀಟ್‌ಗಳು ಇಲ್ಲಿಗೆ ಆಗಮಿಸಿದ್ದು 42 ವಿಭಾಗಗಳಲ್ಲಿ ಪದಕಕ್ಕಾಗಿ ಹೋರಾಡಲಿದ್ದಾರೆ. ಭಾರತ ಮೂರನೇ ಬಾರಿ ಈ ಕೂಟವನ್ನು ಆಯೋಜಿಸುತ್ತಿದೆ. ಈ ಹಿಂದೆ 1989 ಮತ್ತು 2013ರಲ್ಲಿ ಅನುಕ್ರಮವಾಗಿ ಹೊಸದಿಲ್ಲಿ ಮತ್ತು ಪುಣೆಯಲ್ಲಿ ಈ ಕೂಟವನ್ನು ಸಂಘಟಿಸಲಾಗಿತ್ತು.
Related Articles
Advertisement
ಆದರೂ ಈ ಏಶ್ಯನ್ ಕೂಟದಲ್ಲಿ 14 ಆ್ಯತ್ಲೀಟ್‌ಗಳು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಅವರಲ್ಲಿ ರಿಯೋ ಚಿನ್ನ ವಿಜೇತ ತಜಿಕಿಸ್ಥಾನದ ದಿಲೊÏàದ್ ನಝರೋವ್ (ಹ್ಯಾಮರ್) ಪ್ರಮುಖರು. ಈ ಕೂಟದಲ್ಲಿ ಚಿನ್ನದ ಪದಕ ಗೆದ್ದವರು ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಗಳಿಸುವುದರಿಂದ ಈ ಕೂಟಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ.
ಕೆಲವು ಪ್ರಮುಖ ತಾರೆಯರು ಆಗಮಿಸದಿದ್ದರೂ ಚೀನ ಪ್ರಾಬಲ್ಯ ಸ್ಥಾಪಿಸುವ ನಿರೀಕ್ಷೆಯಿದೆ. 50ಕ್ಕಿಂತ ಹೆಚ್ಚಿನ ಆ್ಯತ್ಲೀಟ್‌ಗಳನ್ನು ಹೊಂದಿರುವ ಜಪಾನ್ ಮತ್ತು ಕೊರಿಯ (23 ಮಂದಿ) ಕೂಡ ಅಗ್ರ 5ರೊಳಗಿನ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದೆ. ಎರಡು ವರ್ಷಗಳ ಹಿಂದೆ ಬೀಜಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ಝಾಂಗ್ ಗೋವೆಯಿ ಚೀನ ತಂಡದ ನೇತೃತ್ವ ವಹಿಸಲಿದ್ದಾರೆ. ವನಿತೆಯರ ಪೋಲ್‌ವಾಲ್ಟ್ನಲ್ಲಿ ಏಶ್ಯನ್ ದಾಖಲೆ ಹೊಂದಿರುವ ಲಿ ಲಿಂಗ್ ಹ್ಯಾಟ್ರಿಕ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಭಾರತ ಬಲಿಷ್ಠವಿಶ್ವ ಮಟ್ಟದಲ್ಲಿ ಭಾರತದ ನಿರ್ವಹಣೆ ನೀರಸವಾಗಿದ್ದರೂ ಏಶ್ಯನ್ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ ಬಲಿಷ್ಠವಾಗಿದೆ. ಪ್ರತಿ ಬಾರಿಯೂ ಭಾರತ ಚೀನ ಮತ್ತು ಜಪಾನ್ ಬಳಿಕದ ಸ್ಥಾನ ಪಡೆಯುತ್ತಿದೆ. ಈ ಬಾರಿಯೂ ಲಭ್ಯವಿರುವ ಶ್ರೇಷ್ಠ ಆ್ಯತ್ಲೀಟ್‌ಗಳ ತಂಡವನ್ನೇ ಭಾರತ ಕಣಕ್ಕೆ ಇಳಿಸಿದೆ. 46 ವನಿತೆಯರ ಸಹಿತ 95 ಸದಸ್ಯರನ್ನು ಭಾರತ ಒಳಗೊಂಡಿದೆ. ಭಾರತ ಈ ಹಿಂದಿನ ವುಹಾನ್ ಕೂಟದಲ್ಲಿ 13 ಪದಕದೊಂದಿಗೆ ಮೂರನೇ ಸ್ಥಾನ (4 ಚಿನ್ನ, 5 ಬೆಳ್ಳಿ, 4 ಕಂಚು) ಪಡೆದಿತ್ತು. ಈ ಬಾರಿ ಹೆಚ್ಚಿನ ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಭಾತ ಇಟ್ಟುಕೊಂಡಿದೆ. ಕಡಿಮೆಪಕ್ಷ 5 ಚಿನ್ನ ಸಹಿತ 15 ರಿಂದ 20 ಪದಕವನ್ನಾದರೂ ಭಾರತ ಗೆಲ್ಲಬಹುದೆಂದು ಭಾರತೀಯ ಆ್ಯತ್ಲೆಟಿಕ್ ಫೆಡರೇಶನ್ ನಿರೀಕ್ಷಿಸುತ್ತಿದೆ. 1985ರಲ್ಲಿ ಜಕಾರ್ತದಲ್ಲಿ ನಡೆದ 6ನೇ ಕೂಟದಲ್ಲಿ 22 ಪದಕ ಗೆದ್ದ (10 ಚಿನ್ನ, 5 ಬೆಳ್ಳಿ, 7 ಕಂಚು) ಭಾರತ ತನ್ನ ಶ್ರೇಷ್ಠ ನಿರ್ವಹಣೆ ದಾಖಲಿಸಿತ್ತು. ಪುರುಷರ ಜಾವೆಲಿನ್‌ನಲ್ಲಿ ನೀರಜ್ ಚೋಪ್ರಾ, 400 ಮೀ.ನಲ್ಲಿ ಮುಹಮ್ಮದ್ ಅನಾಸ್, ವನಿತೆಯರ ಶಾಟ್‌ಪುಟ್‌ನಲ್ಲಿ ಮನ್‌ಪ್ರೀತ್ ಕೌರ್ ಮತ್ತು ವನಿತೆಯರ 4ಜ400 ಮೀ. ರಿಲೆಯಲ್ಲಿ ಚಿನ್ನ ನಿರೀಕ್ಷಿಸಲಾಗಿದೆ. ಕಳೆದ ಕೂಟದ ವನಿತೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ ಜಯಿಸಿದ್ದ ಲಲಿತಾ ಬಾಬರ್ ಇತ್ತೀಚೆಗೆ ಮದುವೆ ಆಗಿದ್ದರಿಂದ ಈ ಕೂಟದಲ್ಲಿ ಭಾಗವಹಿಸುತ್ತಿಲ್ಲ. ರಾಂಚಿ ಬದಲು ಭುವನೇಶ್ವರ
ಈ ಕೂಟ ಆರಂಭದಲ್ಲಿ ರಾಂಚಿಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕಳೆದ ಮಾರ್ಚ್‌ನಲ್ಲಿ ಹಣಕಾಸಿನ ಅಡಚಣೆಯಿಂದ ಈ ಕೂಟ ಆಯೋಜಿಸಲು ತನಗೆ ಸಾಧ್ಯವಾಗುವುದಿಲ್ಲವೆಂದು ರಾಂಚಿ ತಿಳಿಸಿದ್ದರಿಂದ ಫೆಡರೇಶನ್ ಬೇರೆ ಸ್ಥಳದ ಹುಡುಕಾಟ ನಡೆಸುವಾಗ ಭುವನೇಶ್ವರವು ಈ ಕೂಟ ಆಯೋಜಿಸಲು ಒಪ್ಪಿಕೊಂಡಿತ್ತು. ಈ ಸವಾಲನ್ನು ಸ್ವೀಕರಿಸಿದ ಒಡಿಶಾ ಸರಕಾರ ತ್ವರಿತ ಗತಿಯಲ್ಲಿ ಕಳಿಂಗ ಕ್ರೀಡಾಂಗಣಕ್ಕೆ ಹೊಸ ಟ್ರ್ಯಾಕ್ ಮತ್ತು ಇನ್ನಿತರ ಸೌಕರ್ಯಗಳನ್ನು ಕಲ್ಪಿಸಿತ್ತು. ಮೊದಲ ದಿನದ ಪ್ರಮುಖರು
ಸ್ಪರ್ಧೆಯ ಮೊದಲ ದಿನವೇ ವನಿತೆಯರ ಶಾಟ್‌ಪುಟ್ ಸ್ಪರ್ಧೆ ನಡೆಯಲಿದ್ದು ಮನ್‌ಪ್ರೀತ್ ಚಿನ್ನ ಗೆಲ್ಲುವ ಸಾಧ್ಯತೆಯಿದೆ. ಚೀನದಲ್ಲಿ ನಡೆದ ಸ್ಪರ್ಧೆಯಲ್ಲಿ 18.86 ಮೀ. ದೂರ ಎಸೆದು ತನ್ನದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡ ಸಾಧನೆಯನ್ನು ಅವರು ಹೊಂದಿದ್ದಾರೆ. ಬುಧವಾರ ತನ್ನ 34ರ ಹರೆಯಕ್ಕೆ ಕಾಲಿಟ್ಟಿರುವ ಖ್ಯಾತ ಡಿಸ್ಕಸ್ ತಾರೆ ವಿಕಾಸ್ ಗೌಡ ಕೂಡ ಮೊದಲ ದಿನವೇ ಕಣಕ್ಕೆ ಇಳಿಯಲಿದ್ದಾರೆ. ಏಶ್ಯನ್ ಮಟ್ಟದಲ್ಲಿ ಹಾಟ್ರಿಕ್ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ. ಕಳೆದ ಎರಡು ಕೂಟಗಳಲ್ಲಿ ಚಿನ್ನ ಜಯಿಸಿದ್ದ ಗೌಡ ಅವರಿಗೆ ಇರಾನ್‌ನ ಇಹಸಾನ್ ಹದಾದಿ ಮತ್ತು ಇರಾಕ್‌ನ ಮುಸ್ತಾಫಾ ಅಲ್ಸಾಮಾಹ್ ಖದಿಮ್ ಸ್ಪರ್ಧೆ ನೀಡಲಿದ್ದಾರೆ. ವನಿತೆಯರ ಲಾಂಗ್‌ಜಂಪ್‌ನಲ್ಲಿ ನಯನಾ ಜೇಮ್ಸ್ ಮತ್ತು ಅನುರಾಣಿ ಪದಕ ಗೆಲ್ಲುವ ಸ್ಪರ್ಧಿಯಾಗಿದ್ದಾರೆ. ಪುರುಷರ ಜಾವೆಲಿನ್‌ನಲ್ಲಿ ವಿಶ್ವ ಜೂನಿಯರ್ ದಾಖಲೆ ಹೊಂದಿರುವ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಫೇವರಿಟ್ ಆಗಿದ್ದಾರೆ. ಆದರೆ ಅವರು ಹಾಲಿ ಚಾಂಪಿಯನ್ ಚೈನೀಸ್ ತೈಪೆಯ ಹುವಾಂಗ್ ಶಿಹ್ ಫೆಂಗ್ ಮತ್ತು ಚಾವೊ ಟಿಸನ್ ಚೆಂಗ್ ಅವರಿಂದ ತೀವ್ರ ಸ್ಪರ್ಧೆ ಎದುರಿಸಲಿದ್ದಾರೆ.