Advertisement
ಈವರೆಗಿನ 14 ಚಿನ್ನದ ಪದಕಗಳಲ್ಲಿ 12ನ್ನು ಗೆದ್ದಿರುವ ಭಾರತವೀಗ 4 ಬೆಳ್ಳಿ, 2 ಕಂಚು ಸೇರಿದಂತೆ 18 ಪದಕಗಳಿಂದ ಸಿಂಗಾರಗೊಂಡಿದೆ.ಸ್ಪರ್ಧೆಯ 5ನೇ ದಿನವಾದ ರವಿವಾರ 10 ಮೀ. ಏರ್ ರೈಫಲ್ ವಿಭಾಗದ ಪುರುಷರ ಮತ್ತು ವನಿತೆಯ ವೈಯಕ್ತಿಕ ವಿಭಾಗದಲ್ಲಿ ಅನುಕ್ರಮವಾಗಿ ದಿವ್ಯಾಂಶ್ ಸಿಂಗ್, ಇಳವೇನಿಲ್ ವಲರಿವನ್ ಸ್ವರ್ಣ ಪದಕದಿಂದ ಸಂಭ್ರಮಿಸಿದರು. ಇದೇ ಸ್ಪರ್ಧೆಯ ಪುರುಷರ ಮತ್ತು ವನಿತೆಯರ ತಂಡ ವಿಭಾಗಗಳಲ್ಲೂ ಭಾರತ ಚಿನ್ನದ ಪದಕ ಜಯಿಸಿತು.
ಕಾಲಿಟ್ಟರು. ಫೈನಲ್‌ನಲ್ಲಿ 249.7 ಅಂಕ ಪಡೆದ ದಿವ್ಯಾಂಶ್ ಚಿನ್ನ ಗೆದ್ದರು. ತಂಡ ವಿಭಾಗದಲ್ಲಿ ಭಾರತ 1880.7 ಅಂಕಗಳಿಂದ ಕೊರಿಯವನ್ನು (1862.3) ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಇಳವೇನಿಲ್‌ಗೆ ಮೊದಲ ಚಿನ್ನ
ವನಿತಾ ವಿಭಾಗದ ಫೈನಲ್‌ನಲ್ಲಿ ಇಳವೇನಿಲ್ 250.5 ಅಂಕ ಸಂಪಾದಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಫೈನಲ್ ಪ್ರವೇಶಿಸಿದ್ದ ಭಾರತ ಉಳಿದಿಬ್ಬರು ಶೂಟರ್‌ಗಳಾದ ಅಪೂರ್ವಿ ಚಾಂಡೇಲ 4ನೇ ಮತ್ತು ಮೇಘನಾ ಸಜ್ಜನರ್ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು ತಂಡ ವಿಭಾಗದ ಫೈನಲ್‌ನಲ್ಲಿ ಇಳವೇನಿಲ್, ಅಪೂರ್ವಿ ಚಾಂಡೇಲ ಮತ್ತು ಮೇಘನಾ ಸಜ್ಜನರ್ ಅವರನ್ನೊಳಗೊಂಡ ಭಾರತ ತಂಡ 1878.6 ಅಂಕಗಳೊಂದಿಗೆ ಚಿನ್ನ ಗೆದ್ದು ಸಂಭ್ರಮಿಸಿತು.
Related Articles
Advertisement