ಹೊಸದಿಲ್ಲಿ: ಏಷ್ಯಾಡ್ ಸಾಫ್ಟ್ಬಾಲ್‌ನಲ್ಲಿ ಭಾರತೀಯ ವನಿತೆಯರ ಪದಾರ್ಪಣೆಗೆ ಕಾಲ ಕೂಡಿಬಂದಿದೆ. ಸಾಫ್ಟ್ಬಾಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎಸ್‌ಬಿಎಐ) ಸೋಮವಾರ ಈ ಪ್ರತಿಷ್ಠಿತ ಪಂದ್ಯಾವಳಿಗಾಗಿ 16 ಸದಸ್ಯರ ತಂಡ ವನ್ನು ಪ್ರಕಟಿಸಿದೆ. ಆಯ್ಕೆಯಾದವರೆಲ್ಲ ಹೊಸದಿಲ್ಲಿ ಯಲ್ಲಿ 2 ವಾರಗಳ ಸಿದ್ಧತಾ ಶಿಬಿರ ಹಾಗೂ ಅಭ್ಯಾಸ ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಷ್ಯನ್ ಚಾಂಪಿಯನ್‌ಶಿಪ್‌ಗ್ಳಲ್ಲಿ ನಿರಂತರ ವಾಗಿ ಪಾಲ್ಗೊಳ್ಳುತ್ತಿರುವುದನ್ನು ಗಮನಿಸಿದ “ಸಾಫ್ಟ್ ಬಾಲ್ ಏಷ್ಯಾ’ ಭಾರತದ ವನಿತಾ ತಂಡಕ್ಕೆ ವೈಲ್ಡ್ ಕಾರ್ಡ್ ಪ್ರವೇಶ ನೀಡಿತು. ತಂಡದಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಮಹಾರಾಷ್ಟ್ರದ ಗರಿಷ್ಠ ಐವರು ಆಟಗಾರ್ತಿಯರಿದ್ದಾರೆ.
ಸಾಫ್ಟ್ಬಾಲ್ ಕಳೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಕ್ರೀಡೆಯಾಗಿ ಕಾಣಿಸಿಕೊಂಡಿತು. 2028ರ ಲಾಸ್ ಏಂಜಲೀಸ್ ಗೇಮ್ಸ್‌ನಲ್ಲೂ ಇರಲಿದೆ.
ಭಾರತ ತಂಡ: ಐಶ್ವರ್ಯಾ ರಮೇಶ್ ಪುರಿ, ಐಶ್ವರ್ಯಾ ಸುನೀಲ್ ಬೊಡೆR, ಮೊನಾಲಿ ಮಾನ್‌ಸಿಂಗ್ ನಾಟು, ಸ್ವಪ್ನಾಲಿ ಸಿ. ವೇದ್ನಾಡೆ, ಸಾಯಿ ಅನಿಲ್ ಜೋಶಿ, ಅಂಜಲಿ ಪಲ್ಲಿಕ್ಕರ, ಸ್ಟೇಫಿ ಸಾಜಿ, ರಿಂತಾ ಚೆರಿಯನ್, ಮಮತಾ ಗುಗುಲೋತ್, ಗಂಗಾ ಸೋನಾ, ಮಮತಾ ಮಿನ್ಹಾಸ್, ಸಂದೀಪಾ ಕೌರ್, ಕುಮಾರಿ ಮನೀಷಾ, ಇಶಾ, ಶ್ವೇತಾಸಿನಿ ಸಾಬರ್, ನಿತ್ಯಾ ಮಾಳ್ವಿ, ಪ್ರಿಯಾಂಕಾ ಬಾಘೆಲ್ (ಸ್ಟಾಂಡ್‌ಬೈ).
ಮೀಸಲು ಆಟಗಾರ್ತಿಯರು: ಮನೀಷಾ ಕುಮಾರಿ, ಪ್ರೀತಿ ವರ್ಮ, ಚೈತ್ರಾ.