Advertisement
ಏಷ್ಯಾಡ್ ಫುಟ್‌ಬಾಲ್ ತಂಡದ ಪ್ರಕಟನೆಗೆ ಜು. 15 ಅಂತಿಮ ದಿನ ವಾಗಿತ್ತು. ಆದರೆ ಭಾರತ ತಂಡ ಈ ಪ್ರತಿಷ್ಠಿತ ಕೂಟದಲ್ಲಿ ಪಾಲ್ಗೊಳ್ಳುವುದೇ ಅನುಮಾನವಾಗಿದ್ದ ಕಾರಣ, ಪಾಲ್ಗೊಂ ಡರೂ ಸೀನಿಯರ್ ಆಡುವುದು ಅನುಮಾನವಾಗಿದ್ದರಿಂದ ಡೆಡ್‌ಲೈನ್ ಒಳಗೆ ತಂಡವೊಂದನ್ನು ರಚಿಸಿ ರವಾನಿಸಲಾಗಿತ್ತು. ಇದರಲ್ಲಿ ಈ ಮೂವರ ಹೆಸರಿರಲಿಲ್ಲ.ಆದರೆ ಭಾರತ ತಂಡದ ಪಾಲ್ಗೊಳ್ಳು ವಿಕೆ ಖಚಿತವಾದ ಬಳಿಕ ಈ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡಲಾ ರಂಭಿಸಿತ್ತು. ಇದನ್ನೊಂದು “ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಆಯ್ಕೆಗೆ ಅನುಮತಿ ನೀಡಬೇಕು ಎಂದು ಸಂಘಟಕರಲ್ಲಿ ಅಖೀಲ ಭಾರತ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣೌ ಚೌಬೆ ವಿನಂತಿಸಿಕೊಂಡಿದ್ದರು.
ಏಷ್ಯನ್ ಗೇಮ್ಸ್ ಸಂಘಟಕರ ಹಾಗೂ ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ ಅನುಮತಿ ಪಡೆದು ಈ ಮೂವರನ್ನು ಸೇರ್ಪಡೆಗೊಳಿಸಲಾಯಿತು.
ಗೋಲ್‌ಕೀಪರ್: ಗುರುಪ್ರೀತ್ ಸಿಂಗ್ ಸಂಧು, ಗುರ್ಮೀತ್ ಸಿಂಗ್, ಧೀರಜ್ ಸಿಂಗ್.
ಡಿಫೆಂಡರ್: ಸಂದೇಶ್ ಜಿಂಗಾನ್, ಅನ್ವರ್ ಅಲಿ, ನರೇಂದರ್ ಗೆಹ್ಲೋಟ್, ಲಾಲ್‌ಚುಂಗ್‌ನುಂಗ, ಆಕಾಶ್ ಮಿಶ್ರಾ, ರೋಶನ್ ಸಿಂಗ್, ಆಶಿಷ್ ರೈ.
ಮಿಡ್‌ಫಿಲ್ಡರ್: ಜೀಕ್ಸನ್ ಸಿಂಗ್, ಸುರೇಶ್ ಸಿಂಗ್, ಅಪಿಯ ರಾಲ್ಟೆ, ಅಮರ್‌ಜೀತ್ ಸಿಂಗ್, ರಾಹುಲ್ ಕೆ.ಪಿ., ಎನ್. ಮಹೇಶ್ ಸಿಂಗ್.
ಫಾರ್ವರ್ಡ್ಸ್: ಶಿವಶಕ್ತಿ ನಾರಾಯ ಣನ್, ರಹೀಂ ಅಲಿ, ಸುನೀಲ್ ಚೆಟ್ರಿ, ಅನಿಕೇತ್ ಜಾಧವ್, ವಿಕ್ರಮ್ ಪ್ರತಾಪ್ ಸಿಂಗ್, ರೋಹಿತ್ ದಾನು.