Advertisement

ಏಷ್ಯಾಕಪ್‌ ಮಹಿಳಾ ಬಾಸ್ಕೆಟ್‌ಬಾಲ್‌: ಭಾರತಕ್ಕೆ ಪ್ರಶಸ್ತಿ

07:20 AM Jul 30, 2017 | |

ಬೆಂಗಳೂರು: ತೀವ್ರ ಪೈಪೋಟಿಯಿಂದ ಸಾಗಿದ ಫಿಬಾ ವನಿತಾ ಏಶ್ಯ ಕಪ್‌ನ ಡಿವಿಷನ್‌ “ಬಿ’ ಹಂತದ ಫೈನಲ್‌ ಹೋರಾಟದಲ್ಲಿ ಭಾರತವು ಕಜಾಕ್‌ಸ್ಥಾನ್‌ ತಂಡವನ್ನು 75-73 ಅಂಕಗಳಿಂದ ಸೋಲಿಸಿದೆ.

Advertisement

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಹೋರಾಟದಲ್ಲಿ ಪಂದ್ಯದ ಬಹುತೇಕ ಸಮತ ಕಜಾಕ್‌ಸ್ಥಾನ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ಎರಡು ನಿಮಿಷಗಳಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಯುವ ಫಾರ್ವರ್ಡ್‌ ಆಟಗಾರ್ತಿ ಶಿರೀನ್‌ ಲಿಮಯೆ ಮತ್ತು ಸ್ಕಾರಿಯಾ ಅವರು ಭಾರತಕ್ಕೆ ರೋಚಕ ಜಯ ತಂದುಕೊಡುವಲ್ಲಿ ನೆರವಾದರು. 

ಪಂದ್ಯ ಮುಗಿಯಲು ಒಂದು ನಿಮಿಷವಿರುವಾಗ ಅವರಿಬ್ಬರು ಅಂಕವನ್ನು 71-71 ಸಮಬಲಕ್ಕೆ ತಂದಿದ್ದರು. ಆಬಳಿಕ ಕಜಾಕ್‌ಸ್ಥಾನಕ್ಕೆ ಮುನ್ನಡೆ ಸಾಧಿಸಲು ಅವಕಾಶವಿದ್ದರೂ ಝಲೀನಾ ಕುರಜೋವಾ ಅಂಕ ಗಳಿಸಲು ವಿಫ‌ಲರಾದರು. ಇದರ ಲಾಭ ಪಡೆದ ಭಾರತ ಲಿಮಯೆ ಇನ್ನೆರಡು ಅಂಕ ಪಡೆದು 73-71 ಮುನ್ನಡೆ ಸಾಧಿಸಿದರು. ಆಗ ಇನ್ನೂ 30 ಸೆಕೆಂಡ್‌ಗಳ ಆಟ ಬಾಕಿ ಉಳಿದಿತ್ತು. ಅಂತಿಮ ಕ್ಷಣದವರೆಗೂ ಹೋರಾಡಿದ ಲಿಮಯೆ ಭಾರತಕ್ಕೆ 75-73 ಅಂತರದ ಗೆಲುವು ತಂದುಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next