Advertisement

Asia Cup; ಶ್ರೀಲಂಕಾ ಹವಾಮಾನ ಕ್ರಿಕೆಟ್‌ ಆಟಕ್ಕೆ ಅನುಕೂಲ

11:52 PM Sep 06, 2023 | Team Udayavani |

ಕೊಲಂಬೊ : ಏಷ್ಯಾ ಕಪ್‌ನ ಆರಂಭಿಕ ಹಂತದ ಪಂದ್ಯಗಳಿಗೆ ಮಳೆ ಬಹಳಷ್ಟು ತೊಂದರೆ ನೀಡಿದ್ದರೂ ಈ ವಾರ ಹವಾಮಾನ ಕ್ರಿಕೆಟ್‌ ಆಟಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ತಿಳಸಿದ್ದರಿಂದ ಸಂಘಟಕರು ಸಮಾಧಾನಗೊಂಡಿದ್ದಾರೆ.

Advertisement

ಸೆ. 9ರ ಬಳಿಕ ಹವಾಮಾನವು ಕ್ರಿಕೆಟಿಗೆ ಅನುಕೂಲಕರವಾಗಿರಲಿದೆ ಎಂದು ಇಲಾಖೆಯ ಪ್ರಧಾನ ನಿರ್ದೇಶಕ ಅತುಲ ಕರುಣನಾಯಕೆ ಹೇಳಿದ್ದಾರೆ. ಈ ವಾರ ಸೂಪರ್‌ ಫೋರ್‌ ಹಂತದ ಪಂದ್ಯಗಳು ನಡೆಯಲಿದ್ದು ಸೆ. 10ರಂದು ಭಾರತ ಮತ್ತು ಪಾಕಿಸ್ಥಾನ ನಡುವೆ ತೀವ್ರ ಪೈಪೋಟಿಯ ಪಂದ್ಯ ನಡೆಯಲಿದೆ. ಈ ಎರಡು ತಂಡಗಳ ಲೀಗ್‌ ಹಂತದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಸೂಪರ್‌ ಫೋರ್‌ ಹಂತದ ಇನ್ನೊಂದು ಪಂದ್ಯದಲ್ಲಿ ರೋಹಿತ್‌ ಪಡೆ ಸೆ. 12ರಂದು ಶ್ರೀಲಂಕಾವನ್ನು ಎದುರಿಸಲಿದ್ದರೆ ಸೆ. 15ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಫೈನಲ್‌ ಸೆ. 17ರಂದು ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next