Advertisement
ಮಂಗಳವಾರದ ಮುಖಾಮುಖಿಯಲ್ಲಿ ಶ್ರೀಲಂಕಾ ವನ್ನು 41 ರನ್ನುಗಳಿಂದ ಮಣಿಸುವ ಮೂಲಕ ಭಾರತ ಅಧಿಕಾರಯುತವಾಗಿ ಫೈನಲ್ ಪ್ರವೇಶಿಸಿತು. ಇದರಿಂದ ಬಾಂಗ್ಲಾದೇಶ ಕೂಟ ದಿಂದ ಹೊರಬಿತ್ತು. ಭಾರತದ ಗೆಲುವಿನಿಂದ ಲಾಭವಾದದ್ದು ಪಾಕಿಸ್ಥಾನಕ್ಕೆ. ಇದರಿಂದ ಬಾಬರ್ ಪಡೆ ಫೈನಲ್ ರೇಸ್‌ನಲ್ಲಿ ಉಳಿಯುವಂತಾಯಿತು. ಅಕಸ್ಮಾತ್ ಗುರುವಾರದ ಪಂದ್ಯ ಮಳೆಯಿಂದ ರದ್ದಾದರೆ ಇದರಿಂದ ಲಂಕೆಗೆ ಲಾಭವಾಗಲಿದೆ. ಅದು ರನ್‌ರೇಟ್‌ನಲ್ಲಿ ಪಾಕಿಸ್ಥಾನಕ್ಕಿಂತ ಮುಂದಿದೆ. ಲಂಕಾ -0.200, ಪಾಕ್ -1.892 ರನ್‌ರೇಟ್ ಹೊಂದಿದೆ.
ಸೂಪರ್-4 ಹಂತದಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳದ್ದು ಸಮಬಲ ಸಾಧನೆ. ಎರಡೂ ತಂಡಗಳು ಬಾಂಗ್ಲಾದೇಶವನ್ನು ಮಣಿ ಸಿವೆ, ಹಾಗೆಯೇ ಭಾರತಕ್ಕೆ ಶರಣಾಗಿವೆ. ಇದರಲ್ಲಿ ಪಾಕಿಸ್ಥಾನದ್ದು ಹೀನಾಯ ಸೋಲಾದರೆ, ಲಂಕೆಯದ್ದು ವೀರೋಚಿತ ಸೋಲು.
Related Articles
Advertisement
ಲಂಕಾ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಪಾಕಿಸ್ಥಾನದ ಟಾಪ್ ಆರ್ಡರ್ ಕ್ಲಿಕ್ ಆಗ ಬೇಕಾ ದುದು ಮುಖ್ಯ. ಆರಂಭಿಕರಾದ ಫಖಾರ್ ಜಮಾನ್, ಇಮಾಮ್ ಉಲ್ ಹಕ್, ನಾಯಕ ಬಾಬರ್ ಆಜಂ ದೊಡ್ಡ ಮೊತ್ತ ಗಳಿಸಬೇಕಿದೆ. ರಿಜ್ವಾನ್, ಸಲ್ಮಾನ್ ಆಘಾ, ಇಫ್ತಿ ಖಾರ್ ಅಹ್ಮದ್ ಕೂಡ ಕ್ಲಿಕ್ ಆಗಬೇಕಾದುದು ಮುಖ್ಯ.
ಅಪಾಯಕಾರಿ ಸ್ಪಿನ್ನರ್ಶ್ರೀಲಂಕಾ ಕೂಡ ಗಾಯದ ಸುಳಿಯಲ್ಲಿ ಸಿಲುಕಿದ ತಂಡ. ಮೊದಲ ಆಯ್ಕೆಯ ಆಟಗಾರ ರಾದ ಹಸರಂಗ, ಚಮೀರ ಮತ್ತು ಲಹಿರು ಕುಮಾರ ಗೈರಲ್ಲಿ ಲಂಕಾ ಹೋರಾಟ ನಡೆಸುತ್ತಿದೆ. ಆದರೆ ದುನಿತ್ ವೆಲ್ಲಲಗೆ, ಮತೀಶ ಪತಿರಣ, ಮಹೀಶ ತೀಕ್ಷಣ ಪರಿಣಾಮಕಾರಿ ಪ್ರದರ್ಶನ ಕಾಯ್ದು ಕೊಂಡು ಬಂದಿದ್ದಾರೆ. ಭಾರತದ ಹತ್ತೂ ವಿಕೆಟ್‌ಗಳನ್ನು ಕೆಡವಿದ ಸ್ಪಿನ್ನರ್ ಲಂಕೆಯ ಅಪಾಯಕಾರಿ ಅಸ್ತ್ರವಾಗಿದ್ದಾರೆ. ಆದರೆ ನಾಯಕ ದಸುನ್ ಶಣಕ ಮತ್ತು ಪೇಸರ್ ಕಸುನ್ ರಜಿತ ಅವರ ಸತತ ವೈಫಲ್ಯ ಚಿಂತೆಗೀಡು ಮಾಡಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೇಲೆ ಲಂಕಾ ಯಶಸ್ಸು ಅಡಗಿದೆ. ನಿಸ್ಸಂಕ, ಕರುಣಾರತ್ನೆ, ಮೆಂಡಿಸ್, ಸಮರವಿಕ್ರಮ ಮೊದಲಾದವರೆಲ್ಲ ಅಫ್ರಿದಿ ಆ್ಯಂಡ್ ಕಂಪೆನಿಯ ಬೌಲಿಂಗ್ ದಾಳಿ ಯನ್ನು ಎದುರಿಸಿ ನಿಲ್ಲುವುದು ಅತ್ಯಗತ್ಯ. ಅಂದಹಾಗೆ ಇದು ಈ ಕೂಟದಲ್ಲಿ ಶ್ರೀಲಂಕಾ-ಪಾಕಿಸ್ಥಾನ ನಡುವಿನ ಮೊದಲ ಮುಖಾಮುಖಿ ಆಗಿದೆ.