Advertisement
ಮಳೆ ಅಡ್ಡಿಯ ನಡುವೆ ಸಾಗಿದ ಮೀಸಲು ದಿನದ ಪಂದ್ಯದಲ್ಲಿ 357 ರನ್ ಗಳ ಸವಾಲು ಪಡೆದ ಪಾಕಿಸ್ಥಾನ 32 ಓವರ್ ಗಳಲ್ಲಿ 128 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಭಾರತ 228 ರನ್ ಗಳ ಭಾರಿ ಗೆಲುವು ಸಾಧಿಸಿತು. ಪಾಕ್ ನ ಕೊನೆಯಲ್ಲಿ ಬರಬೇಕಾದ ನಸೀಮ್ ಮತ್ತು ಹ್ಯಾರಿಸ್ ಫೀಲ್ಡಿಂಗ್ ಮಾಡುವಾಗ ಗಾಯದೊಂದಿಗೆ ಹೊರ ಹೋಗಿದ್ದು ,ಅವರು ಬ್ಯಾಟಿಂಗ್‌ಗೆ ಬರದ ಕಾರಣ 8 ವಿಕೆಟ್ ಕಳೆದುಕೊಂಡಾಗಲೇ ಆಟ ಮುಗಿಯಿತು.
Related Articles
ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅತ್ಯಮೋಘ ಶತಕಗಳನ್ನು ಸಿಡಿಸಿ ಭಾರತದ ಬ್ಯಾಟಿಂಗ್ ಬಲ ಸಾಬೀತುಪಡಿಸಿದ್ದಾರೆ. ಭಾರತ 50 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 356 ರನ್ ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಕೊಹ್ಲಿ 122 ರನ್ ಗಳಿಸಿ ಅಜೇಯರಾಗಿ ಉಳಿದರು.93 ಎಸೆತಗಳಲ್ಲಿ ಆಕರ್ಷಕ 9 ಬೌಂಡರಿ ಮತ್ತು 3 ಸಿಕ್ಸರ್ ಅವರ ಇನ್ನಿಂಗ್ಸ್ ನ ಆಕರ್ಷಣೆಯಾಗಿತ್ತು. ಜವಾಬ್ದಾರಿಯುತ ಆಟವಾಡಿದ ರಾಹುಲ್ ಅಜೇಯ 111 ರನ್ ಗಳಿಸಿದರು.106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಅವರ ಆಟದ ಆಕರ್ಷಣೆಯಾಗಿತ್ತು. 3 ನೇ ವಿಕೆಟ್ ಗೆ ಇಬ್ಬರು 233 ರನ್ ಜತೆಯಾಟವಾಡಿದ್ದು ಇದು ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತೀ ದೊಡ್ಡ ಜತೆಯಾಟವಾಗಿದೆ.
Advertisement
ನಿನ್ನೆ ಭಾರಿ ಮಳೆಯಿಂದ ಪಂದ್ಯ ಮುಂದೂಡಿಕೆಯಾದ ವೇಳೆ 24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. 8 ರನ್ ಗಳಿಸಿದ್ದ ಕೊಹ್ಲಿ ಮತ್ತು 17 ರನ್ ಗಳಿಸಿದ್ದ ರಾಹುಲ್ ಇಂದು ಆಕರ್ಷಕ ಜತೆಯಾಟವನ್ನು ಆಡಿದರು. ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ 56 ರನ್ ಶುಭಮನ್ ಗಿಲ್ 58 ರನ್ ಗಳಿಸಿ ಔಟಾಗಿದ್ದರು.