ಸಿಲ್ಹೆಟ್: ವನಿತಾ ಏಷ್ಯಾಕಪ್ ಕೂಟದ ರೋಚಕ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಥಾಯ್ಲೆಂಡ್ ವಿರುದ್ಧ ಸೋಲನುಭವಿಸಿ 24 ಗಂಟೆಗಳ ಒಳಗಾಗಿ ಪಾಕಿಸ್ಥಾನದ ತಂಡವು ಮತ್ತೊಂದು ಶಾಕಿಂಗ್ ಫಲಿತಾಂಶ ನೀಡಿದೆ.
ಸಿಲ್ಹೆಟ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನವು ಆರು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದರೆ, ಭಾರತ ತಂಡದ ಎರಡು ಎಸೆತ ಬಾಕಿ ಇರುವಂತೆ 124 ರನ್ ಗೆ ಆಲೌಟಾಯಿತು.
ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನಕ್ಕೆ ನಾಯಕಿ ಮರೂಫ್ ಮತ್ತು ನಿದಾ ದರ್ ಉತ್ತಮ ಬೆಂಬಲ ನೀಡಿದರು. ಅರ್ಧಶತಕ ಸಿಡಿಸಿದ ನಿದಾ ದರ್ ಅಜೇಯ 56 ರನ್ ಗಳಿಸಿದರೆ, ನಾಯಕಿ ಮರೂಫ್ 32 ರನ್ ಮಾಡಿದರು. ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್, ಪೂಜಾ ವಸ್ತ್ರಾಕರ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತದ ಅಟಾಗಾರ್ತಿಯರು ಆರಂಭ ಪಡೆದರೂ ಯಾರೂ ದೊಡ್ಡ ಇನ್ನಿಂಗ್ ಆಡಲಿಲ್ಲ. ಮಂಧನಾ 17 ರನ್, ಹೇಮಲತಾ 20 ರನ್, ದೀಪ್ತಿ ಶರ್ಮಾ 16 ರನ್ ಗಳಿಸಿದರು. ಕೊನೆಯಲ್ಲಿ ಕೀಪರ್ ರಿಚಾ ಘೋಷ್ ಕೇವಲ 13 ಎಸತೆಗಳಲ್ಲಿ ಮೂರು ಸಿಕ್ಸರ್ ಸಹಿತ 26 ರನ್ ಗಳಿಸಿದರು. ಅವರು ಔಟಾಗುತ್ತಿದ್ದಂತೆ ಭಾರತ ತಂಡದ ಸೋಲು ಕೂಡಾ ಖಾತ್ರಿಯಾಯಿತು. ಎರಡು ಎಸೆತ ಬಾಕಿ ಇರುವಂತೆ ಎಲ್ಲಾ ವಿಕೆಟ್ ಕಳೆದುಕೊಂಡ ಭಾರತ 13 ರನ್ ಅಂತರದಿಂದ ಸೋಲನುಭವಿಸಿತು.
ಇದನ್ನೂ ಓದಿ:BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್
ಅರ್ಧಶತಕ ಮತ್ತು ಎರಡು ವಿಕೆಟ್ ಕಿತ್ತ ನಿದಾ ದರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕೂಟದಲ್ಲಿ ತಲಾ ಮೂರು ಪಂದ್ಯ ಗೆದ್ದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದೆ.