Advertisement

ಕೋವಿಡ್ 19 ಕಳವಳ: ಏಷ್ಯಾ ಕಪ್ ಕ್ರಿಕೆಟ್ ನಡೆಯುವುದು ಡೌಟು

05:48 PM Mar 31, 2020 | keerthan |

ಹೊಸದಿಲ್ಲಿ: ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಆಯೋಜಿಸುವ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಕೂಟ ಕೋವಿಡ್-19 ವೈರಸ್‌ ನಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Advertisement

ಮುಂದಿನ ಆರು ತಿಂಗಳು ವಿಶ್ವದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುವುದು ಅಸಾಧ್ಯ, ಹೀಗಾಗಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ ನಡೆಯುವುದು ಅನುಮಾನ ಎಂದು ಬಿಸಿಸಿಐನ ಸದಸ್ಯರೊಬ್ಬರು ತಿಳಿಸಿದ್ದಾರೆ.

2018ರಲ್ಲಿ ಪಾಕಿಸ್ಥಾನದಲ್ಲಿ ಏಷ್ಯಾಕಪ್‌ ನಡೆಯುವುದು ಎಂದು ಘೋಷಣೆಯಾಗಿತ್ತು, ಆದರೆ ಭಾರತ ಭದ್ರತಾ ನೆಪವೊಡ್ಡಿ ಅಲ್ಲಿಗೆ ತೆರಳಲು ನಿರಾಕರಿಸಿತ್ತು. ಇದೀಗ ತಟಸ್ಥತಾಣ ದುಬೈನಲ್ಲಿ ಕೂಟ ನಡೆಸುವುದು ಎಂದು ಹೇಳಲಾಗಿದೆಯಾದರೂ ಖಚಿತಗೊಂಡಿಲ್ಲ.

ಭಾರತ ಸೇರಿದಂತೆ ಕೂಟದಲ್ಲಿ ಏಷ್ಯಾದ ಒಟ್ಟು 6 ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಮಾ.3ರಂದು ಎಸಿಸಿ ಅಧಿಕೃತ ಸ್ಥಳವನ್ನು ಪ್ರಕಟಿಸುವುದಕ್ಕೆ ಸಭೆ ಕರೆದಿತ್ತು. ಆದರೆ ಕೋವಿಡ್-19 ವೈರಸ್‌ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next