Advertisement

ಏಷ್ಯಾ ಕಪ್‌ ಬಾಸ್ಕೆಟ್‌ಬಾಲ್‌: ಭಾರತ ತಂಡ ಶುಭಾರಂಭ

09:22 AM Jul 24, 2017 | Team Udayavani |

ಬೆಂಗಳೂರು: ಫಿಬಾ ಏಷ್ಯಾ ಕಪ್‌ ಮಹಿಳಾ ಬಾಸ್ಕೆಟ್‌ಬಾಲ್‌ ಕೂಟದಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಗುಂಪು “ಬಿ’ ಪಂದ್ಯದಲ್ಲಿ ಉಜ್ಬೇಕಿಸ್ತಾನ ತಂಡವನ್ನು 92-76 ಅಂತರಗಳಿಂದ ಭಾರತೀಯರು ಮಣಿಸಿದರು.

Advertisement

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ಪರ ಅನಿತಾ ಪಾಲ್‌ ದುರಾಯ್‌ (28 ಅಂಕ), ಗ್ರಿಮಾ ಮರ್ಲಿ ನ್‌ (17 ಅಂಕ) ಹಾಗೂ ಜೀನಾ ಸಕಾರಿಯಾ (12 ಅಂಕ) ನೆರವಿನಿಂದ ಭಾರತ ಗೆಲುವುಗಳಿಸಲು ಸಾಧ್ಯವಾ  ಯಿತು. ಉಜ್ಬೇಕಿಸ್ತಾನದ ಪರ ಎಲ್ವಿರಾ ಸಲಾವಟೋವಾ (15 ಅಂಕ), ಎಲೆನಾ (13 ಅಂಕ) ಹಾಗೂ ನತಾಲ್ಯ ಕೊನೆವಾ (13 ಅಂಕ) ಪಡೆದರೂ ಉಜ್ಬೇಕಿಸ್ತಾನಕ್ಕೆ ಗೆಲುವು ಗಳಿಸಲು ಸಾಧ್ಯವಾಗಲಿಲ್ಲ. ಇನ್ನು ಉಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಜಪಾನ್‌, ಚೀನಾ, ಸಿಂಗಾಪುರ ಹಾಗೂ ಚೈನೀಸ್‌ ತೈಪೆ ತಂಡಗಳು ಶುಭಾರಂಭ ಮಾಡಿದೆ. “ಎ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 78-54 ಅಂಕಗಳ ಅಂತರದಿಂದ ಕೊರಿಯಾ ವಿರುದ್ಧ ಗೆಲುವು ಸಾಧಿಸಿತು. ವಿಶ್ವ ನಂಬರ್‌ 4ನೇ ಸ್ಥಾನ ಹೊಂದಿರುವ ಆಸ್ಟ್ರೇಲಿಯಾ ಆರಂಭದಲ್ಲಿ ನಿಧಾನಗತಿ ಆಟ ಪ್ರದರ್ಶಿಸಿತು. ಈ ಹಂತದಲ್ಲಿ ಕೊರಿಯಾ ಸ್ವಲ್ಪ ಅಂಕಗಳಿಂದ ಮುಂದಿತ್ತು. ಬಳಿಕ ಆಸೀಸ್‌ ದಿಟ್ಟ ಆಟ ಪ್ರದರ್ಶಿಸಿತು. ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲುವು ಪಡೆಯಿತು.

ಮತ್ತೂಂದು ಪಂದ್ಯದಲ್ಲಿ ಫಿಲಿಪ್ಪೀನ್ಸ್‌ ವಿರುದ್ಧ ಜಪಾನ್‌ 106-55 ಅಂಕಗಳ ಅಂತರದ ಗೆಲುವು ಪಡೆದು ಮುನ್ನಡೆ ಪಡೆಯಿತು. μಲಿಪ್ಪೀನ್ಸ್‌ ಅನ್ನು ಎಲ್ಲೂ ಎಚ್ಚೆತ್ತು ಪ್ರದರ್ಶನ ನೀಡಲು ಜಪಾನ್‌ ಬಿಡಲಿಲ್ಲ. ಬಹುತೇಕ ಈ ಪಂದ್ಯ ಏಕಪಕ್ಷೀಯವಾಗಿ ಸಾಗಿತು ಎನ್ನುವುದು ವಿಶೇಷ. ಮತ್ತೂಂದು ಪಂದ್ಯದಲ್ಲಿ ಚೈನೀಸ್‌ ತೈಪೆ 77-76 ಅಂಕಗಳ ಅಂತರದಿಂದ ರಿಪಬ್ಲಿಕ್‌ ಕೊರಿಯಾ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಪಂದ್ಯ ಕೊನೆ ಹಂತದವರೆಗೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಯಾರು ಗೆಲ್ಲುತ್ತಾರೆ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಚೈನೀಸ್‌ ತೈಪೆ 1 ಅಂಕದೊಂದಿಗೆ ಗೆಲ್ಲುವುದರೊಂದಿಗೆ ಕುತೂಹಲಕ್ಕೆ ತೆರೆಬಿದ್ದಿತು. 

ಮತ್ತೂಂದು ಪಂದ್ಯದಲ್ಲಿ ಚೀನಾ 77-48 ಅಂಕಗಳ ಅಂತರದಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು. ನ್ಯೂಜಿಲೆಂಡ್‌ ಕೂಟದ ಪ್ರಬಲ ತಂಡ.
ಇದನ್ನು ಮಣಿಸಿರುವುದು ಚೀನಾದ ಸಾಧನೆಯೇ ಸರಿ. ಚೀನಾ ಪರ ಮೆಂಗ್‌ ಲೀ 15, ಯಿ ಶೆನ್‌ 14 ಹಾಗೂ ಶುವಾಂಗ್‌ ಜೋ 14 ಅಂಕ ಪಡೆದು
ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನ್ಯೂಜಿಲೆಂಡ್‌ ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸಿತು. ಜಿಲಿಯಾನ್‌ ಹಾರ್ಮೊನ್‌ 14 ಅಂಕ ಪಡೆದು ನ್ಯೂಜಿಲೆಂಡ್‌ ಗೆಲುವಿಗಾಗಿ ಸ್ವಲ್ಪ ಹೋರಾಟ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಇನ್ನೊಂದು ಪಂದ್ಯದಲ್ಲಿ ಸಿಂಗಾಪುರ 103-38 ಅಂಕಗಳಿಂದ μಜಿ
ತಂಡವನ್ನು ಸೋಲಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next