Advertisement

Asia Cup: ಬಾಬರ್,ಇಫ್ತಿಕಾರ್ ಶತಕಗಳ ಅಬ್ಬರ; ನೇಪಾಲ ಗೆಲುವಿಗೆ 343 ಗುರಿ

09:34 PM Aug 30, 2023 | Team Udayavani |

ಮುಲ್ತಾನ್‌ : ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಬುಧವಾರ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ಥಾನ ತಂಡ ನೇಪಾಲಕ್ಕೆ ಭರ್ಜರಿ ಮೊತ್ತದ ಸವಾಲು ಎದುರಿಟ್ಟಿದೆ.

Advertisement

ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 25 ರನ್ ಆಗುವಷ್ಟರಲ್ಲಿ ಮೊದಲ 2 ವಿಕೆಟ್ ಕಳೆದುಕೊಂಡಿತು. ಫಖರ್ ಜಮಾನ್ 14, ಇಮಾಮ್-ಉಲ್-ಹಕ್ 5 ರನ್ ಗಳಿಸಿದ್ದ ವೇಳೆ ರನೌಟಾದರು.

ಆಬಳಿಕ ಬಂದ ಏಕದಿನ ಕ್ರಿಕೆಟ್ ನ ನಂಬರ್ ಒನ್ ಬ್ಯಾಟ್ಸ್ ಮ್ಯಾನ್ ಬಾಬರ್ ಅಜಂ ಅಬ್ಬರಿಸಿದರು. ತಾಳ್ಮೆಯ ಆಟವಾಡಿ ಶತಕ ಪೂರ್ತಿಗೊಳಿಸಿದರು.151(131 ಎಸೆತ) ರನ್ ಗಳಿಸಿದ್ದ ವೇಳೆ ಕೊನೆಯಲ್ಲಿ ಔಟಾದರು. ಬಾಬರ್ ರೊಂದಿಗೆ ಉತ್ತಮ ಆಟವಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ವಿಲಕ್ಷಣ ರನೌಟ್ (ದೀಪೇಂದ್ರ ಸಿಂಗ್) ಆದರು. ಅವರು 44 ರನ್ ಗಳಿಸಿದ್ದರು. ಆಬಳಿಕ ಬಾಬರ್ ಅವರಿಗೆ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ ಔಟಾಗದೆ 109 ರನ್ ಗಳಿಸಿದರು. ಸ್ಪೋಟಕ ಶತಕ ಸಿಡಿಸಿದ ಅವರು ಒಟ್ಟು 71 ಎಸೆತಗಳಲ್ಲಿ 109 ರನ್ ಗಳಿಸಿದರು. 6 ವಿಕೆಟ್ ನಷ್ಟಕ್ಕೆ 342 ರನ್ ಕಲೆಹಾಕಿ ಭರ್ಜರಿ ಮೊತ್ತವನ್ನು ನೇಪಾಲ ತಂಡದ ಮುಂದಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next