ಹೊಸದಿಲ್ಲಿ: ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪುರುಷರ ಹಿರಿಯ ಆಯ್ಕೆ ಸಮಿತಿಯು ಆಗಸ್ಟ್ 21 ಸೋಮವಾರದಂದು ಹೊಸದಿಲ್ಲಿಯಲ್ಲಿ ಸಭೆ ಸೇರಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್ 2023ಕ್ಕೆ ತಂಡವನ್ನು ಆಯ್ಕೆ ಮಾಡಲಿದೆ.
ನಾಯಕ ರೋಹಿತ್ ಶರ್ಮಾ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದಂತಹ ತಂಡಗಳು ಈಗಾಗಲೇ ತಮ್ಮ ಏಷ್ಯಾ ಕಪ್ ತಂಡವನ್ನು ಪ್ರಕಟಿಸಿದೆ. ಆದರೆ ಪ್ರಮುಖ ಆಟಗಾರರು ಗಾಯದಿಂದ ಚೇತರಿಕೆಯ ಅಪ್ಡೇಟ್ ವಿಳಂಬವಾಗುತ್ತಿರುವ ಕಾರಣ ಭಾರತ ತಂಡದ ಆಯ್ಕೆಯಲ್ಲಿ ತಡವಾಗಿದೆ.
ಇದನ್ನೂ ಓದಿ:Nagara Panchami Special; ಈ ಬಾರಿಯ ನಾಗರಪಂಚಮಿಗೆ ನೀವೇ ತಯಾರಿಸಿ ಅರಶಿನ ಎಲೆ ಕಡುಬು!
ಇದೇ ವೇಳೆ ಭಾರತದ ವಿಶ್ವಕಪ್ ಸಂಭಾವ್ಯ ತಂಡವೂ ಆಯ್ಕೆಯಾಗಬಹುದು ಎನ್ನಲಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ತಂಡವನ್ನು ಈಗಾಗಲೇ ಪ್ರಕಟಿಸಿದೆ.
ಭಾರತ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಅವರಿಬ್ಬರೂ ಏಷ್ಯಾಕಪ್ ಆಡುತ್ತಾರಾ ಎನ್ನುವುದು ಸೋಮವಾರಷ್ಟೇ ತಿಳಿಯಲಿದೆ.