Advertisement

Asia Cup 2023: 17 ಮಂದಿಯ ಶ್ರೇಷ್ಠ ತಂಡ ಪ್ರಕಟಿಸಿದ ಭಾರತ; ಸ್ಟಾರ್‌ ಆಟಗಾರನಿಗಿಲ್ಲ ಸ್ಥಾನ

02:22 PM Aug 21, 2023 | Team Udayavani |

ನವದೆಹಲಿ: ಏಷ್ಯಾ ತಂಡಗಳ ಕ್ರಿಕೆಟ್‌ ಹಣಾಹಣೆ ಏಷ್ಯಾಕಪ್‌ 2023 ರ ಪಂದ್ಯಾವಳಿಗೆ ಸೋಮವಾರ (ಆ.21 ರಂದು) ಟೀಮ್‌ ಇಂಡಿಯಾದ ತಂಡ ಪ್ರಕಟಗೊಂಡಿದೆ.

Advertisement

ತಂಡದ ಪ್ರಕಟನೆಯ ವೇಳೆ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯ ಮುಂದೆ ಕೆಲವು ಜಟಿಲ ಸವಾಲುಗಳಿತ್ತು. ಮುಖ್ಯವಾಗಿ ಸ್ಪಿನ್ನರ್‌ ಗಳ ವಿಚಾರದಲ್ಲಿ ಕೆಲ ಸವಾಲುಗಳಿತ್ತು. ಏಷ್ಯಾ ಪಿಚ್‌ ಗಳಲ್ಲಿ ಸ್ಪಿನ್ ಮೋಡಿ ಹೆಚ್ಚಾಗಿ ನಡೆಯುವುದರಿಂದ ಈ ಸಾಲಿನಲ್ಲಿ ಕುಲದೀಪ್‌, ಚಹಲ್‌, ಜಡೇಜ, ಅಕ್ಷರ್‌ ಪಟೇಲ್‌ ಮತ್ತು ಆರ್‌. ಅಶ್ವಿ‌ನ್‌ ರೇಸ್‌ನಲ್ಲಿದ್ದರು. ಶಾರ್ದೂಲ್‌ ಠಾಕೂರ್‌ ಮತ್ತು ಪ್ರಸಿದ್ಧ್ ಕೃಷ್ಣ ನಡುವೆ, ಹಾಗೆಯೇ ಕೆ.ಎಲ್‌. ರಾಹುಲ್‌-ಶ್ರೇಯಸ್‌ ಅಯ್ಯರ್‌ ನಡುವೆ ಬಲವಾದ ಸ್ಪರ್ಧೆ ಇತ್ತು.

ಈ ಎಲ್ಲದರ ಬಗ್ಗೆ ಗಮನ ಹರಿಸಿ 17 ಮಂದಿಯ ಶ್ರೇಷ್ಠ ತಂಡವನ್ನು ಏಷ್ಯಾಕಪ್‌ ಗಾಗಿ ಆಯ್ಕೆ ಸಮಿತಿ ಪ್ರಕಟಿಸಿದೆ. ನಾಯಕ ರೋಹಿತ್‌ ಶರ್ಮಾ ಹಾಗೂ ಅಜಿತ್‌ ಅಗರ್ಕರ್‌ ಪ್ರತಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು. ಅಜಿತ್‌ ಅಗರ್ಕರ್‌ ತಂಡವನ್ನು ಘೋಷಿಸಿದರು.

ಏಷ್ಯಾಕಪ್‌ ಗಾಗಿ ಟೀಮ್‌ ಇಂಡಿಯಾ ತಂಡ:

ರೋಹಿತ್ ಶರ್ಮಾ(ನಾ) ವಿರಾಟ್ ಕೊಹ್ಲಿ, ಶುಭಮನ್‌ ಗಿಲ್‌, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, (ಉಪ ನಾಯಕ) ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

Advertisement

ಮುಖ್ಯವಾಗಿ ಯಜುವೇಂದ್ರ ಚಹಲ್ ಅವರನ್ನು ಹೊರಗಿಡಲಾಗಿದೆ. ಸಂಜು ಸ್ಯಾಮ್ಸನ್‌ ಅವರನ್ನು ಬ್ಯಾಕಪ್‌ ಪ್ಲೇಯರ್‌ ಆಗಿ ಇಡಲಾಗಿದೆ.

ಶ್ರೀಲಂಕಾವನ್ನು ಹೊರತುಪಡಿಸಿ, ಏಷ್ಯಾ ಕಪ್ 2023 ರಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿವೆ. ಈ ಬಾರಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ನಡೆಯಲಿದೆ. ಭಾರತ ಪಾಕ್‌ ಗೆ ಪ್ರಯಾಣಿಸಲು ನಿರಾಕರಿಸಿರುವ ಕಾರಣ, ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.

ಏಷ್ಯಾಕಪ್‌ ಆ.31 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ vs ನೇಪಾಳ ತಂಡಗಳು ಹೋರಾಟ ನಡೆಸಲಿವೆ. ಸೆ.20 ರಂದು ಭಾರತ vs ಪಾಕಿಸ್ತಾನ ತಂಡಗಳು ಶ್ರೀಲಂಕಾದ ಮೈದಾನದಲ್ಲಿ ಆಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next