Advertisement

ಏಶ್ಯಕಪ್ ಸೂಪರ್-4 ಪಂದ್ಯ: ಪಾಕ್ ವಿರುದ್ಧ ಲಂಕೆಗೆ ಗೆಲುವು

11:54 PM Sep 09, 2022 | Team Udayavani |

ದುಬಾೖ: ರವಿವಾರ ನಡೆಯುವ ಏಷ್ಯಾ ಕಪ್‌ ಫೈನಲ್‌ ಪಂದ್ಯಕ್ಕೆ ರಿಹರ್ಸಲ್‌ ಆಗಿರುವ ಶುಕ್ರವಾರದ ಕಟ್ಟಕಡೆಯ ಸೂಪರ್‌ ಫೋರ್‌ ಪಂದ್ಯದಲ್ಲಿ ಲಂಕಾ ತಂಡವು ಆಲ್‌ರೌಂಡ್‌ ಪ್ರದರ್ಶನ ನೀಡಿ ಪಾಕಿಸ್ಥಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಶ್ರೀಲಂಕಾದ ಬಿಗು ದಾಳಿಗೆ ತತ್ತರಿಸಿದ ಪಾಕಿಸ್ಥಾನ 19.1 ಓವರ್‌ಗಳಲ್ಲಿ 121ಕ್ಕೆ ಆಲೌಟ್‌ ಆಗಿದ್ದರೆ ಶ್ರೀಲಂಕಾ ತಂಡವು 17 ಓವರ್‌ಗಳಲ್ಲಿ 5 ವಿಕೆಟಿಗೆ 124 ರನ್‌ ಗಳಿಸಿ ಜಯ ಸಾಧಿಸಿತು. ಶ್ರೀಲಂಕಾ ತಂಡ ಒಂದು ಹಂತದಲ್ಲಿ 29 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಒದ್ದಾಡಿತ್ತು. ಆದರೆ ಆರಂಭಿಕ ಆಟಗಾರ ಪಥುಮ್‌ ನಿಸ್ಸಾಂಕ ಅವರ ಅಮೋಘ ಆಟದಿಂದಾಗಿ ತಂಡ ಜಯ ಕಾಣುವಂತಾಯಿತು. ಅವರು ಅಜೇಯ 55 ರನ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಈ ಮೊದಲು ವನಿಂದು ಹಸರಂಗ ಸಹಿತ ಶ್ರೀಲಂಕಾದ ಬೌಲರ್‌ಗಳ ಅಮೋಘ ದಾಳಿಯಿಂದಾಗಿ ಪಾಕಿಸ್ಥಾನ ಆಟಗಾರರು ಉತ್ತಮ ಆಟ ಪ್ರದರ್ಶಿಸಲು ವಿಫ‌ಲರಾದರು. ಹಸರಂಗ ಕೇವಲ 21 ರನ್ನಿಗೆ 3 ವಿಕೆಟ್‌ ಹಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next