Advertisement

ಏಷ್ಯಾ ಕಪ್‌ ಟಿ20: ಶ್ರೀಲಂಕಾ ವಿರುದ್ಧ ಅಫ್ಘಾನ್‌ಗೆ ಭರ್ಜರಿ ಜಯ

10:24 PM Aug 27, 2022 | Team Udayavani |

ದುಬೈ: ಶನಿವಾರ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಉದ್ಘಾಟನಾ ಪಂದ್ಯ ನಡೆಯಿತು. ಒಂದು ಕಾಲದ ವಿಶ್ವವಿಖ್ಯಾತ ತಂಡ ಶ್ರೀಲಂಕಾವನ್ನು ಈಗಷ್ಟೇ ಚಿಗುರೊಡೆಯುತ್ತಿರುವ ಅಫ್ಘಾನಿಸ್ತಾನ 8 ವಿಕೆಟ್‌ಗಳಿಂದ ಸೋಲಿಸಿತು.

Advertisement

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಶ್ರೀಲಂಕಾ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿತು. ಅದು 19.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟಾಯಿತು. ಇದನ್ನು ಬೆನ್ನತ್ತಿದ ಅಫ್ಘಾನಿಸ್ತಾನ 10.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 106 ರನ್‌ ಗಳಿಸಿತು. ಆರಂಭಿಕ ರೆಹ್ಮಾನುಲ್ಲಾ ಗುರ್ಬಾಜ್‌ 18 ಎಸೆತಗಳಲ್ಲಿ 40 ರನ್‌ ಚಚ್ಚಿದರು.

ಝಝಾರಿ 37 ರನ್‌ ಗಳಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಲಂಕಾ ಪರ ಭಾನುಕ ರಾಜಪಕ್ಸ 38 ರನ್‌ ಗಳಿಸಿದ್ದೇ ಬೃಹತ್‌ ಮೊತ್ತವೆನಿಸಿಕೊಂಡಿತು. ಚಮಿಕ ಕರುಣಾರತ್ನೆ 31 ರನ್‌ ಗಳಿಸಿದರು. ಫ‌ಝಲ್‌ಹಖ್‌ ಫಾರೂಖೀ 3, ಮುಜೀಬ್‌ ಉರ್‌ ರೆಹಮಾನ್‌, ಮೊಹಮ್ಮದ್‌ ನಬಿ ತಲಾ 2 ವಿಕೆಟ್‌ ಪಡೆದರು. ಅಫ್ಘಾನ್‌ ಬೌಲರ್‌ಗಳು ನಿಕಟ ದಾಳಿ ನಡೆಸಿದ್ದರಿಂದ ಲಂಕಾ ಬ್ಯಾಟಿಗರು ತತ್ತರಿಸಿದರು.

ಹಾಗೆಯೇ ತಾನು ವೈಭವವನ್ನು ಪೂರ್ಣವಾಗಿ ಕಳೆದುಕೊಂಡಿದ್ದೇನೆಂದು ಶ್ರೀಲಂಕಾ ತಂಡ ಮತ್ತೊಮ್ಮೆ ಸಾರಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next