Advertisement
ಕೃಷ್ಣಾ ನದಿ ತೀರದ ತಾಲೂಕಿನ ಕಲ್ಲೋಳ ಗ್ರಾಮದ ತುಕಾರಾಮ ಕೋಳಿ(49) ಎಂಬ ಯೋಗ ಪಟು. ಕಳೆದ ನಾಲ್ಕೈದು ವರ್ಷಗಳಿಂದ ಆರೋಗ್ಯ ಸುಧಾರಣೆಗಾಗಿ ರೂಢಿಸಿಕೊಂಡ ಯೋಗಾಭ್ಯಾಸ ಅವರ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರುವಂತೆ ಮಾಡಿದೆ.
Related Articles
Advertisement
ಸೂರ್ಯ ನಮಸ್ಕಾರವು 12 ಯೋಗ ಭಂಗಿಗಳಿಂದ ಕೂಡಿದ್ದು, ನರಮಂಡಲವನ್ನು ಉತ್ತೇಜಿಸುತ್ತದೆ. ಮೊದಲು 4ರಿಂದ 5 ಸೂರ್ಯ ನಮಸ್ಕಾರ ಹಾಕಲು ಕಷ್ಟ ವಾಗುತ್ತಿತ್ತು. 500 ಸೂರ್ಯ ನಮಸ್ಕಾರ ಹಾಕುವುದನ್ನು ಕರಗತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ. 6 ತಿಂಗಳ ಅಭ್ಯಾಸದಿಂದ 50 ರಿಂದ 60 ಸೂರ್ಯ ನಮಸ್ಕಾರ ಹಾಕುವುದನ್ನು ಕರಗತ ಮಾಡಿಕೊಂಡಿದ್ದೆ ಎಂದರು.
ಚೆನ್ನೈನ ಪಿ.ವಿಜಯಕುಮಾರ ಎಂಬುವವರು 15 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಹಾಕಿ ಲಿಮ್ಕಾ ಬುಕ್ ಆಫ್ ರಿಕಾರ್ಡ್ ಹೆಸರು ದಾಖಲಿಸಿದ್ದಾರೆ ಎಂಬುವುದು ತಿಳಿಯಿತು. ಅವರ ದಾಖಲೆಯನ್ನು ಮೀರಿಸಬೇಕು ಎಂದು ಗುರಿ ಇಟ್ಟುಕೊಂಡು ದಿನನಿತ್ಯ ಅಭ್ಯಾಸ ಆರಂಭಿಸಿದೆ. 10 ನಿಮಿಷದಲ್ಲಿ 112 ಸೂರ್ಯ ನಮಸ್ಕಾರ ಹಾಕುವುದನ್ನು ಕಲಿತೆ. ಅದು ಈಗ ನನ್ನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ 2019ರಲ್ಲಿ ದಾಖಲಾಗಿದೆ. ಅದರಂತೆ 30 ನಿಮಿಷದಲ್ಲಿ 278 ಸೂರ್ಯ ನಮಸ್ಕಾರ ಹಾಕಿ ಕಳೆದ ವರ್ಷ ಏಷ್ಯಾ ಬುಕ್ ಆಫ್ ರೆಕಾರ್ಡದಲ್ಲಿ ದಾಖಲಾಗಿದೆ ಎಂದು ಯೋಗಪಟು ಸಾಧನೆ ಬಿಚ್ಚಿಟ್ಟರು.
ಇಂದಿನ ಯುವಕರು ಐಶಾರಾಮಿ ಜೀವನದ ಮೂಲಕ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಿರುವುದು ನೋವಿನ ಸಂಗತಿ. ದೇಹವನ್ನು ದಂಡಿಸಲು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತುಕಾರಾಮ ಕೋಳಿ ಯುವಕರಿಗೆ ಕರೆ ನೀಡಿದರು.
ವರದಿ- ಮಹಾದೇವ ಪೂಜೇರಿ