Advertisement

ನಿರಾಶ್ರಿತ ಕುಟುಂಬಗಳಿಗೆ ಬೆಳಕು ಕಲ್ಪಿಸಿದ ಎಎಸ್‌ಐ ದೊರೆಸ್ವಾಮಿ

02:39 PM Jan 07, 2021 | Team Udayavani |

ಎಚ್‌.ಡಿ.ಕೋಟೆ: ಜೀವನೋ ಪಾಯಕ್ಕಾಗಿ ನೆರೆಯ ಆಂಧ್ರಪ್ರದೇಶದಿಂದ ಆಗಮಿಸಿ ಬಯಲಿನಲ್ಲಿ ಟೆಂಟ್‌ ಹಾಕಿಕೊಂಡು
ಕಗ್ಗತ್ತಲಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತ ಕುಟುಂಬಗಳಿಗೆ ಸೋಲಾರ್‌ ಲೈಟ್‌ ಕಲ್ಪಿಸುವ ಮೂಲಕ ಎಎಸ್‌ಐ ದೊರೆಸ್ವಾಮಿ
ಮಾನವೀಯತೆ ಮೆರೆದಿದ್ದಾರೆ.

Advertisement

ಎಚ್‌.ಡಿ.ಕೋಟೆ ಪೊಲೀಸ್‌ ಠಾಣೆ ಎಎಸ್‌ಐ ದೊರೆಸ್ವಾಮಿ, 10 ಸಾವಿರ ರೂ. ಮೌಲ್ಯದ 3 ಸೋಲಾರ್‌ ದೀಪಗಳನ್ನು ಕೊಡುಗೆಯಾಗಿ ನೀಡಿ, ನಿರಾಶ್ರಿತರ ಕುಟುಂಬಗಳಿಗೆ ಬೆಳಕು ಮೂಡಿಸಿದ್ದಾರೆ. ಪಟ್ಟಣದಲ್ಲಿ ಒಂದು ವರ್ಷದ ಹಿಂದೆ
ಆಂಧ್ರಪ್ರದೇಶದಿಂದ ಸುಮಾರು 6-7 ಬಡ ಕುಟುಂಬಗಳು 25ಕ್ಕೂ ಅಧಿಕ ಮಂದಿ ಪುಟಾಣಿಗಳೊಟ್ಟಿಗೆ ಟೆಂಟ್‌ ನಿರ್ಮಿಸಿಕೊಂಡು ನೆಲೆಯೂರಿದ್ದಾರೆ. ತಲೆ ಕೂದಲು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಈ ಟೆಂಟ್‌ ಸಮೀಪ ಭಾರೀ ಗಾತ್ರದ ವಿಷ ಪೂರಿತ ಹಾವು ಕಾಣಿಸಿಕೊಂಡಿತ್ತು. ಅಲ್ಲದೇ ಈ ಟೆಂಟ್‌ಗಳು ಬಟಬಯಲಿನಲ್ಲಿ ಹಾಕಿ ರುವುದರಿಂದ ಹುಳಗಳು, ಹಾವು, ಚೇಳುಗಳು ಬರುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ:ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದ ಸಾರಿಗೆ ಸಂಸ್ಥೆ ಚಾಲಕ ಅತ್ಮಹತ್ಯೆ ಯತ್ನ

ಈ ವಿಷಯ ತಿಳಿಯುತ್ತಿದ್ದಂತೆ ಎಎಸ್‌ಐ ದೊರೆ ಸ್ವಾಮಿ ಅವರು ಸ್ಥಳಕ್ಕೆ ಆಗಮಿಸಿ, ನಿರಾಶ್ರಿತ ಕುಟುಂಬಗಳ ದುಸ್ಥಿತಿಯನ್ನು
ಕಂಡು, ತಮ್ಮ ಸ್ವಂತ ಹಣದಿಂದ ಸೋಲಾರ್‌ ದೀಪ ಹಾಕಿಸಿಕೊಟ್ಟಿದ್ದಾರೆ. ಸಮಾಜಮುಖೀ ಕೆಲಸಗಳ ಮೂಲಕ ಜನ ಮನ್ನಣೆ ಪಡೆದಿರುವ ಎಎಸ್‌ಐ ದೊರೆಸ್ವಾಮಿ ಅವರು ಈ ಹಿಂದೆ ನಾಲ್ಕೈದು ಕಿ.ಮೀ. ಹದಗೆಟ್ಟಿದ್ದ ರಸ್ತೆಯನ್ನು ಸ್ವಂತ ಹಣ ವ್ಯಯಿಸಿ ದುರಸ್ತಿಪಡಿಸಿದ್ದರು.

Advertisement

ಜೊತೆಗೆ ಇಬ್ಬರು ಅನಾಥ ಬಾಲಕಿಯರನ್ನು ದತ್ತು ಪಡೆದು ಅವರ ಶಿಕ್ಷಣವನ್ನು ಸಂಪೂರ್ಣ ಹೊಣೆಯನ್ನು ಹೊತ್ತಿದ್ದಾರೆ.
ಅಲ್ಲದೇ ಈ ಅವರಿಗೆ ಮನೆಯನ್ನು ನವೀಕರಣಗೊಳಿಸಿ, ಆಸರೆಯಾಗಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಬಡವರಿಗೆ ಆಹಾರ ಕಿಟ್‌, ಮಾಸ್ಕ್ಗಳನ್ನು ದೊರೆಸ್ವಾಮಿ ಉಚಿತವಾಗಿ ವಿತರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next