Advertisement

ಮಹಾಭಾರತದ “ಅರಗಿನ ಮನೆ” ಉತ್ಖನನಕ್ಕೆ ಕೊನೆಗೂ ಎಎಸ್ಐ ಅನುಮತಿ

01:50 PM Nov 02, 2017 | Sharanya Alva |

ಮೀರತ್(ಉತ್ತರಪ್ರದೇಶ):ಮಹಾಭಾರತದಲ್ಲಿ ಪಾಂಡವರು ವಾಸಿಸಿದ್ದರು ಎನ್ನಲಾದ ಉತ್ತರಪ್ರದೇಶದ ಮೀರತ್ ನಲ್ಲಿರುವ “ಅರಗಿನ ಮನೆ”(ಲಾಕ್ಷ್ಯಗೃಹ)ಯ ಉತ್ಖನನಕ್ಕೆ ಕೊನೆಗೂ ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಅನುಮತಿಯನ್ನು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಮೀರತ್ ನ ಭಾಗ್ ಪಟ್ ಜಿಲ್ಲೆಯ ಬರ್ನಾವಾ ಪ್ರದೇಶದಲ್ಲಿ ಪಾಂಡವರು ವಾಸಿಸಿದ್ದ ಅರಗಿನ ಮನೆ ಇದೆ ಎಂಬುದು ಸ್ಥಳೀಯರ ನಂಬಿಕೆ. ಈ ಹಿನ್ನೆಲೆಯಲ್ಲಿ ಲಾಕ್ಷ್ಯಗೃಹ ಹೊಂದಿರುವ ಭೂ ಪ್ರದೇಶದ ಉತ್ಖನನಕ್ಕೆ ಅವಕಾಶ ಕೊಡಬೇಕೆಂದು ಪುರಾತತ್ವ ಇಲಾಖೆಯವರು ಹಾಗೂ ಸ್ಥಳೀಯ ಸಂಶೋಧಕರು ಆರ್ಕ್ಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ(ಎಎಸ್ಐ)ಕ್ಕೆ ಮನವಿ ಸಲ್ಲಿಸಿದ್ದರು.

ಮಹಾಭಾರತ ಮಹಾಕಾವ್ಯದಲ್ಲಿನ ಅರಗಿನ ಮನೆ ತುಂಬಾ ಮಹತ್ವದ ಅಂಶವಾಗಿದೆ. ಕೌರವರು ನಿರ್ಮಿಸಿದ ಅರಗಿನ ಮನೆ ಇದಾಗಿತ್ತು. ಪಾಂಡವರನ್ನು ಜೀವಂತವಾಗಿ ಸುಡುವ ಸಂಚು ಕೌರವನದ್ದಾಗಿತ್ತು. ಆದರೆ ಪಾಂಡವರು ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡಿದ್ದರು ಎಂಬುದು ಕಥೆ ಎಂಬುದಾಗಿ  ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಕೆಕೆ ಶರ್ಮಾ ತಿಳಿಸಿದ್ದಾರೆ.

ಈ ಅರಗಿನ ಮನೆ ಇರುವ ಪ್ರದೇಶ ಈಗ ಬಾಗ್ ಫಟ್ ಎಂದು ಕರೆಯಲಾಗುವ ಈ ಪ್ರದೇಶ ಬರ್ನಾವಾ ಆಗಿದೆ. ನಿಜಕ್ಕೂ ವರ್ಣಾವೃತ್ ಎಂದು ತಿರುಚಿ ಬರ್ನಾವಾ ಮಾಡಲಾಗಿದೆ. ಕೌರವನಲ್ಲಿ ಪಾಂಡವರು ಬೇಡಿಕೆ ಇಟ್ಟಿದ್ದ ಐದು ಗ್ರಾಮಗಳಲ್ಲಿ ವರ್ಣಾವೃತ್ ಕೂಡಾ ಒಂದಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next