Advertisement

ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

10:03 PM Sep 28, 2022 | Team Udayavani |

ಮೈಸೂರು: ವಿಶ್ವವಿಖ್ಯಾತ ಹಬ್ಬ ಎಂದೇ ಪ್ರಸಿದ್ಧಿ ಪಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಕೇಂದ್ರಬಿಂದುವಾದ ಯುವ ದಸರಾ ಸಮಾರಂಭವನ್ನು ಅಪ್ಪು ನಮನದ ಮೂಲಕ ಡಾ.ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

Advertisement

ಉದ್ಘಾಟನೆ ಬಳಿಕ ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡಿ, ಅಂದು ಅಪ್ಪುವನ್ನು ಪ್ರೀತಿಸುತ್ತಿದ್ದಿರಿ. ಇಂದು ಪೂಜಿಸುತ್ತಿದ್ದಿರಾ. ಹೀಗಾಗಿ ಇಂದು ಅಪ್ಪುವನ್ನು ಎಲ್ಲರಲ್ಲೂ ನೋಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ಕನ್ನಡ, ಕನ್ನಡಿಗರು, ಸೂರ್ಯ ಹಾಗೂ ಚಂದ್ರ ಇರುವವರೆಗೂ ಅಪ್ಪು ಅಜರಾಮರರಾಗಿರುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅದರಂತೆ ದಸರಾ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಅಭಿಮಾನಿಗಳನ್ನು ದೇವರು ಅಂದವರು ಅಪ್ಪು. ಆದರೆ ಇಂದು ಅವರೆ ಅಭಿಮಾನಿಗಳಿಗೆ ದೇವರಾಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳುವುದರ ಜೊತೆಗೆ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ, ದಯವಿಟ್ಟು ಗಮನಿಸಿ ಚಿತ್ರದ ಮರೆತು ಹೋದೆನು…. ಹಾಡನ್ನು ಹಾಗೂ ಟಗರು ಚಿತ್ರದ ಡೈಲಾಗ್ ಹೊಡೆಯುವ ಮೂಲಕ ನಟ ವಶಿಷ್ಠ ಸಿಂಹ ಅಭಿಮಾನಿಗಳನ್ನು ರಂಜಿಸಿದರು.

ಗಾಯಕಿ ಅನುರಾಧ ಭಟ್ ಅವರು ಡಾ.ಪುನೀತ್ ರಾಜ್ ಕುಮಾರ್ ಹಾಗೂ ರಮ್ಯ ನಟನೆಯ ಆಕಾಶ್ ಚಿತ್ರದ ಆಹಾ ಎಂತ ಆಕ್ಷಣ ನೆನೆದರೆ ತಲ್ಲಣ ಎಂಬ ಹಾಡನ್ನು ಹಾಡಿದರು. ನಂತರ ಗುರುಕಿರಣ್ ಅವರು ಮೈಲಾರಿ ಚಿತ್ರದ ಮೈಲಾಪುರದ ಮೈಲಾರಿ ಹಾಗೂ ಅಪ್ಪು ಚಿತ್ರದ ತಾಲಿಬಾನ್ ಅಲ್ಲಾ ಅಲ್ಲಾ…. ಬಿನ್ ಲಾಡೆನ್ ಅಲ್ವೆ ಅಲ್ಲ ಹಾಗೂ ಅಭಿ ಚಿತ್ರದ ಮಾಮಾ ಮಜಾ ಮಾಡು ಹಾಡನ್ನು ಮತ್ತು ಮೌರ್ಯ ಚಿತ್ರದ ಅಮ್ಮಾ ಅಮ್ಮಾ ಐ ಲವ್ ಯೂ ಚಿತ್ರದ ಹಾಡನ್ನು ಹಾಡಿ ಅಭಿಮಾನಿಗಳನ್ನು ಕುಣಿಸಿ ರಂಜಿಸಿದರು.

Advertisement

ನಂತರ ಗುರುಕಿರಣ್ ಅವರು ಮಾತನಾಡಿ, ಅಪ್ಪು ಅವರೊಂದಿಗೆ ಕಳೆದ ಸುಮಧರ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ನನ್ನ ಹಾಗೂ ಪುನೀತ್ ಸ್ನೇಹಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರೇ ಕಾರಣ ಎಂದು ಹೇಳಿದರು. ಇದರಿಂದ ವೇದಿಕೆ ಹಾಗೂ ಮೈದಾನದ ತುಂಬಾ ಅಪ್ಪು ಅಪ್ಪು ಹೆಸರು ಮಾರ್ಧನಿಸಿತು.

ರಾಘವೇಂದ್ರ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರಿಗಾಗಿ ಡಾ.ರಾಜ್ ಕುಮಾರ್ ನಟಿಸಿರುವ ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬಿಳಿಸಿ ನೋಡು ಉರುಳಿ ಹೋಗದು ಹಾಗೂ ರಾಜಕುಮಾರ ಚಿತ್ರದ ಹಾಡನ್ನು ಅಭಿಮಾನಿಗಳನ್ನು ರಂಜಿಸಿದರು.

ಭಾವನ ಹಾಗೂ ಇಬ್ರಾಹಿಂ ತಂಡದವರು ನಟ ಸಾರ್ವಭೌಮ ಚಿತ್ರದ ಹಾಡಿಗೆ ಹಾಗೂ ಪವರ್ ಚಿತ್ರದ ಧಮ್ ಪವರೆ ಹಾಡಿಗೆ ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮನರಂಜಿಸುವುದರ ಜೊತೆಗೆ ಎದೆ ತುಂಬಿ ಹಾಡುವೇನು ತಂಡದವರು ಪುನೀತ್ ರಾಜ್ ಕುಮಾರ್ ನಟನೆಯ ಪವರ್ ಚಿತ್ರದ ಧಮ್ ಪವರೇ ಹಾಡನ್ನು ಹಾಗೂ ರಾಜಕುಮಾರ ಚಿತ್ರದ ಹಾಡನ್ನು ಹಾಡುವ ಮೂಲಕ ನೆರೆದಿದ್ದ ಸಭಿಕರನ್ನು ಮೈ ಮರೆಸುವಂತೆ ಹಾಡಿದರು.

ಯುವ ಸಂಭ್ರಮದಲ್ಲೂ ಅಪ್ಪು ಹವಾ:- ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಮೈಸೂರು ನೃತ್ಯ ಕಲಾವಿದರ ಕಲಾತಂಡವು ಡಾ.ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಾದ ಯುವರತ್ನ, ಜಾಕಿ, ಪವರ್, ಅಣ್ಣಾಬಾಂಡ್ ಸೇರಿದಂತೆ ಅನೇಕ ಚಿತ್ರಗಳಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಂಜಿಸುವುದರ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದರು.

ಡಾ.ಪುನೀತ್ ರಾಜ್ ಕುಮಾರ್ ಹೆಸರು ಹಾಗೂ ಹಾಡುಗಳು ಬರುತ್ತಿದ್ದಂತೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಕುಣಿದು ಕುಪ್ಪಳಿಸಿ ಯುವ ಸಂಭ್ರಮದಲ್ಲಿ ಸಡಗರದಿಂದ ಪಾಲ್ಗೊಂಡರು. ಹಾಡು ಮುಗಿದ ಬಳಿಕವು ಮೈದಾನದಲ್ಲಿ ಅಪ್ಪು ಅಪ್ಪು ಎನ್ನುವ ಮೂಲಕ ಅಭಿಮಾನಿಗಳೂ ಸಹ ಅಪ್ಪು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ನಿರೂಪಕಿ ಹಾಗೂ ನಟಿ ಅನುಶ್ರೀ, ವಿನಯ್ ರಾಜ್ ಕುಮಾರ್, ಧೀರನ್ ರಾಮ್ ಕುಮಾರ್, ಗಂಧದ ಗುಡಿ ಚಿತ್ರದ ನಿರ್ದೇಶಕರಾದ ಅಮೋಘ ವರ್ಷ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ್, ಶಾಸಕರಾದ ಎಲ್.ನಾಗೇಂದ್ರ, ಸಂಸದರಾದ ಪ್ರತಾಪ್ ಸಿಂಹ, ಮಹಾಪೌರರಾದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಹಾಗೂ ಯುವ ದಸರಾದ ಉಪ ವಿಶೇಷಾಧಿಕಾರಿಯೂ ಆದ ಆರ್.ಚೇತನ್, ಅಧ್ಯಕ್ಷ ಕಿರಣ್ ಗೌಡ, ಜಿಲ್ಲಾ ಪಂಚಾಯತಿಯ ಸಿಇಒ ಬಿ.ಆರ್.ಪೂರ್ಣಿಮಾ, ವಸ್ತು ಪ್ರದರ್ಶನ ಪ್ರಾಧಿಕಾರಾದ ಆದ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next