Advertisement

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ರೇವನಾಥ್ ವಿಧಿವಶ

03:46 PM Feb 20, 2022 | Team Udayavani |

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲುವಿಕೆಯಿಂದ ನೊಂದಿದ್ದ ಅಶ್ವಿನಿ ಅವರಿಗೆ ನೋವಿನ ಮೇಲೆ ನೋವು ಎಂಬಂತೆ ಅವರ ತಂದೆ ರೇವನಾಥ್ (78) ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ.

Advertisement

ಹೃದಯಾಘಾತದಿಂದ ರೇವನಾಥ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಬಾಗೇಮನೆಯವರಾಗಿದ್ದ ಬಿ.ರೇವನಾಥ್ ಪತ್ನಿ ವಿಜಯ ರೇವನಾಥ್ ಪುತ್ರಿ ಅಶ್ವಿನಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ರೇವನಾಥ್ ಅವರು ಸಿನಿಮಾ ವಿತರಕರಾಗಿದ್ದರು, ಎಸ್ಟೇಟ್ ಮಾಲೀಕರಾಗಿದ್ದ ಅವರು ಚಿತ್ರಮಂದಿರವನ್ನೂ ಹೊಂದಿದ್ದರು.ಕಳೆದ 40 ವರ್ಷಗಳಿಂದಲೂ ರೇವನಾಥ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next