Advertisement
ನನ್ನಮ್ಮನೇ ನನಗೆ ಮರುಜನ್ಮವಿತ್ತಿದ್ದಾಳೆ, ಯಕ್ಷಮಾತೆಯ ರೂಪದಲ್ಲಿ. ಅವಳು ಮಾನಸಿಕವಾಗಿ, ಬೌದ್ಧಿಕವಾಗಿ ನನ್ನನ್ನು ದೃಢವಾಗಿಸಿದಳು. ಎಷ್ಟೇ ವಿರೋಧ ಬಂದರೂ ನನ್ನ ಆತ್ಮಸಾಕ್ಷಿಯನ್ನು ಮಾತ್ರ ಅನುಸರಿಸಿದೆ. ಕೇವಲ ಹೆಣ್ಣು ಎನ್ನುವ ಕಾರಣಕ್ಕಾಗಿಯೇ ನನ್ನಲ್ಲಿರುವ ಪ್ರತಿಭೆಯನ್ನು, ಅಗಾಧ ಪ್ರೀತಿಯನ್ನು ಕೊಂದು ಬದುಕುವ ಮನಸ್ಥಿತಿ ನನ್ನದಾಗಿರಲಿಲ್ಲ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿದೇಶದಲ್ಲಿ ಉದ್ಯೋಗ ದೊರಕಿದರೂ ಯಕ್ಷಗಾನದ ಸೆಳೆತದಿಂದ ವಿದೇಶಕ್ಕೆ ಹೋಗಲೇ ಇಲ್ಲ! ನಂತರ ಯಕ್ಷಗಾನದಿಂದಾಗಿಯೇ ಹಲವು ಬಾರಿ ವಿದೇಶ ಪ್ರಯಾಣ ಮಾಡಿದೆ ! ಯಕ್ಷಗಾನದ ಪ್ರಾರಂಭದ ದಿನಗಳಲ್ಲಿ, ನನ್ನ ತಂದೆ ಖ್ಯಾತ ಕಲಾವಿದರಾದ ಕಾರಣ ಹಲವರು ಅವರಂತೆಯೇ ನನ್ನನ್ನು ಅಳೆಯಲು ಪ್ರಾರಂಭಿಸು ತ್ತಿದ್ದರು. ಅದು ನಿಜವಾಗಿಯೂ ಪರೀಕ್ಷೆ ಅನಿಸುತ್ತಿತ್ತು. ಆ ವರ್ಗ ಒಂದಾದರೆ, ಇನ್ನೊಂದು ವರ್ಗ ಅಷ್ಟೆಲ್ಲ ಓದಿ ಯಕ್ಷಗಾನ ಮಾಡುವುದಾ ಎನ್ನುತ್ತಿತ್ತು ! ಮತ್ತೂಂದು ವರ್ಗ ಏನು ಮಾಡಿದರೂ ತಪ್ಪು ಎನ್ನುತ್ತಿತ್ತು. ಅದರ ನಡುವೆಯೂ ಅತ್ಯಂತ ಪ್ರೀತಿಯಿಂದ ಪ್ರೋತ್ಸಾಹ ಕೊಟ್ಟ ಜನರೂ ಇದ್ದರು. ಏನೇ ಆದರೂ ಯಕ್ಷಗಾನ ನನ್ನ ಅಮ್ಮನೇ ಆಗಿ ಹೋಗಿತ್ತು. ಅಮ್ಮನನ್ನು ಹೇಗೆ ಬಿಡಲಿ! ಹೀಗೆ ಹಲವು ಹೇಳಲಾರದ ಸವಾಲುಗಳನ್ನು ಸ್ವೀಕರಿಸುತ್ತ ಶ್ರದ್ಧೆಯಿಂದ ಧೈರ್ಯದಿಂದ ಮುಂದುವರಿದೆ.
Advertisement
ಮರುಜನ್ಮವಿತ್ತ ಯಕ್ಷಮಾತೆ
12:30 AM Mar 08, 2019 | |
Advertisement
Udayavani is now on Telegram. Click here to join our channel and stay updated with the latest news.