Advertisement
“ವಿಶ್ವಕಪ್ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಒಂದು ಅಭ್ಯಾಸ ಪಂದ್ಯಾವಳಿಯಾಗಿದೆ. ಎಲ್ಲವೂ ಏಷ್ಯಾದ ಸ್ಪಿನ್ ಟ್ರ್ಯಾಕ್‌ನಲ್ಲೇ ನಡೆಯಲಿವೆ. ಹೀಗಾಗಿ ಅನುಭವಿ ಸ್ಪಿನ್ನರ್‌ಗಳಾದ ಅಶ್ವಿನ್ ಮತ್ತು ಚಹಲ್ ಅವರನ್ನು ಕಡೆಗಣಿಸಬಾರದಿತ್ತು. ಕುಲದೀಪ್ ಎಸೆತಗಳಿಗೆ ಆಸ್ಟ್ರೇಲಿಯನ್ನರು ಚೆನ್ನಾಗಿಯೇ ಉತ್ತರಿಸಿದ್ದಾರೆ. ಚಹಲ್ ಓರ್ವ ಮ್ಯಾಚ್ ವಿನ್ನಿಂಗ್ ಬೌಲರ್’ ಎಂಬುದಾಗಿ ಮದನ್‌ಲಾಲ್ ಪಿಟಿಐ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
“712 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅಶ್ವಿನ್ ಇನ್ನೂ ಸಾಧಿಸಿ ತೋರಬೇಕಾದದ್ದು ಏನಿದೆ? ಸೀನಿಯರ್ ಆಟಗಾರನಾಗಿಯೂ ಅವರನ್ನು ಸರಿ ಯಾಗಿ ನಡೆಸಿಕೊಳ್ಳಲಿಲ್ಲ. ಅವರೋರ್ವ ಕ್ವಾಲಿಟಿ ಪ್ಲೇಯರ್. ಏಷ್ಯಾ ಕಪ್‌ಗೆ ಅವರನ್ನು ಆರಿಸಬೇಕಿತ್ತು. ಭಾರತದ ಟ್ರ್ಯಾಕ್‌ಗಳಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಶ್ವಿನ್ ಕೀ ಬೌಲರ್ ಆಗ ಲಿದ್ದಾರೆ’ ಎಂಬುದು ಕರ್ಸನ್ ಘಾವ್ರಿ ಅವರ ಅಭಿಪ್ರಾಯವಾಗಿತ್ತು. ಫಿಟ್‌ನೆಸ್ ಪ್ರಶ್ನಾರ್ಹ
ಏಷ್ಯಾ ಕಪ್‌ಗೆ ಆಯ್ಕೆಯಾದ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್‌ನೆಸ್ ಕುರಿತೂ ಮದನ್‌ಲಾಲ್ ಪ್ರಶ್ನೆಯನ್ನೆತ್ತಿದರು.
“ಏಷ್ಯಾ ಕಪ್ ಮತ್ತು ವಿಶ್ವ ಕಪ್‌ಗ್ಳೆರಡೂ ಪ್ರತಿಷ್ಠಿತ ಪಂದ್ಯಾವಳಿಗಳಾಗಿವೆ. ಇಲ್ಲಿ ಫಿಟ್‌ನೆಸ್ ಗುಣ ಮಟ್ಟ ನಿರ್ಣಾಯಕವಾಗಿರುತ್ತದೆ. ನೀವು ದೈಹಿಕವಾಗಿ ಸಮರ್ಥರಾಗದೇ ಇದ್ದಲ್ಲಿ ಮಾನಸಿಕ ವಾಗಿಯೂ ಸಮರ್ಥರಾಗಿರುವು ದಿಲ್ಲ’ ಎಂದು ಮದನ್‌ಲಾಲ್ ಎಚ್ಚರಿಸಿದರು.