ರಾಮನಗರ: ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ವಿದಾಯ ಭಾಷಣದ ವೇಳೆ ಭಾವನಾತ್ಮಕವಾಗಿ ಮಾತನಾಡಿದ್ದು ಕಣ್ಣಿರು ಬಂದಿದೆ, ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣೀರ ಹಿನ್ನೆಲೆ ಏನು ಎಂದು ಪ್ರಶ್ನಿಸಿರುವುದು ವ್ಯಂಗ್ಯದಿಂದ ಕೂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಕಣ್ಣೀರಿನ ಹಿನ್ನೆಲೆ ಏನು ಎಂಬುದನ್ನು ರಾಜ್ಯ ಬಿಜೆಪಿ ವಿವರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಅವರು ರಾಮನಗರದಲ್ಲಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ 75 ವರ್ಷದ ನಂತರ ಯಾರಿಗೂ ಅಧಿಕಾರ ಕೊಡುವುದಿಲ್ಲ.
ಇದನ್ನೂ ಓದಿ : ಕಾಂಗ್ರೆಸ್ ನತ್ತ ಮುಖ ಮಾಡಿದ್ರಾ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ .?
ಯಡಿಯೂರಪ್ಪ ಅವರ ನಿಷ್ಠೆ ಮತ್ತು ಶ್ರಮವನ್ನು ಗುರುತಿಸಿ ಪಕ್ಷದ ರಾಷ್ಟ್ರೀಯ ನಾಯಕರು ವಿಶೇಷವಾದ ಗೌರವವನ್ನು ಕೊಟ್ಟು ಮುಖ್ಯ ಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟರು. ಅವರ ನಿರ್ಗಮನದ ವೇಳೆಯೂ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ಬಿ.ಎಸ್.ವೈ ಅವರು ತಮ್ಮ ವಿದಾಯ ಭಾಷಣದ ವೇಳೆ ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ.
ಈ ವೇಳೆ ಭಾವುಕರಾಗಿ, ಕಣ್ಣೀರು ಸುರಿಸಿದ್ದಾರೆ. ಭಾವನಾತ್ಮಕವಾಗಿ ಹೊರ ಬಂದ ಕಣ್ಣೀರಿಗೆ ಡಿ.ಕೆ.ಶಿವಕುಮಾರ್ ಅದರ ಹಿನ್ನೆಲೆ ಏನು ಎಂದು ಪ್ರಶ್ನಿಸಿರುವುದು ವ್ಯಂಗ್ಯ, ಕುಚೋದ್ಯದಿಂದ ಕೂಡಿದೆ. ಟೀಕೆಗಳಂತಹ ಹೇಳಿಕೆ ಕೊಟ್ಟು ತಮ್ಮ ರಾಜಕೀಯವಾಗಿ ಮಾತನಾಡಿದ್ದಾರೆ ಎಂದು ಅಶ್ವಥನಾರಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯ್ತಿ ದುಡ್ಡು, ಡಿಕೆಶಿ ಫೋಟೋ!
ಬಿಜೆಪಿ ಸಂಸದರಿಂದ ನ್ಯಾಯ ಸಿಕ್ಕಿಲ್ಲ ಎಂಬ ಡಿಕೆಶಿ ಅವರ ಮತ್ತೊಂದು ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹದಿನೈದನೇ ಹಣಕಾಸು ಯೋಜನೆಯಡಿಯಲ್ಲಿನ ಗ್ರಾಮಪಂಚಾಯ್ತಿಗಳ ಅನುದಾನದಡಿಯಲ್ಲಿ ಕನಕಪುರ ತಾಲೂಕಿನಲ್ಲಿಆಹಾರ ಕಿಟ್‌ಗಳನ್ನು ವಿತರಿಸಿದ್ದು, ಡಿ.ಕೆ.ಶಿ ಅವರು ತಮ್ಮ ಫೋಟೋ ಹಾಕಿಕೊಂಡಿದ್ದಾರೆ, ಕೇಂದ್ರ ಸರ್ಕಾರವನ್ನು ಟೀಕಿಸುವ ನೈತಿಕತೆ ಇವರಿಗಿಲ್ಲ ಎಂದು ಅಶ್ವಥನಾರಾಯ ಗೌಡ ಗುಡುಗಿದ್ದಾರೆ.
ಇದನ್ನೂ ಓದಿ : ರೈತರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ ಕೇಂದ್ರದ ಬಿಜೆಪಿ ಸರಕಾರ: ಶಾಸಕ ಪಿ.ರಾಜೀವ್