Advertisement

SEP ಜಾರಿಗೆ ಮುಂದಾದ ರಾಜ್ಯ ಸರ್ಕಾರದ ವಿರುದ್ಧ ಅಶ್ವತ್ಥನಾರಾಯಣ ಕಿಡಿ

10:09 PM Feb 05, 2024 | Team Udayavani |

ಬೆಂಗಳೂರು: ಎನ್‌ಇಪಿ ರದ್ದುಪಡಿಸಿ ಎಸ್‌ಇಪಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಾಜಿ ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ವಿದ್ಯಾರ್ಥಿ ಹಿತಕ್ಕೆ ಧಕ್ಕೆ ತರುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

ಪಕ್ಷ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 3ನೇ ರಾಷ್ಟ್ರೀಯ ಶಿಕ್ಷಣ ನೀತಿ ಇದಾಗಿದ್ದು, ಶಿಕ್ಷಣ ಗುಣಮಟ್ಟ ಹೆಚ್ಚಳ, ಅದರಲ್ಲಿರುವ ನ್ಯೂನತೆಗಳನ್ನು ಹೋಗಲಾಡಿಸಲು ಪೂರಕವಾಗಿದೆ. ಸಾಕಷ್ಟು ಪೂರ್ವತಯಾರಿ ಮಾಡಿ, 6 ವರ್ಷಕ್ಕಿಂತ ಹೆಚ್ಚು ಸಮಯ ಸಮಾಲೋಚನೆ ಬಳಿಕ ಜಾರಿಗೊಳಿಸಲಾಗಿದೆ. ಅದರ ಅನುಷ್ಠಾನ ಆಗಿ 3 ವರ್ಷಗಳಾಗಿದ್ದು, 2020ರಲ್ಲಿ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟ ಒಪ್ಪಿದೆ. ಅದರ ಆಧಾರದಲ್ಲೇ ಅನುಷ್ಠಾನ ಕಾರ್ಯ ನಡೆದಿದೆ ಎಂದು ವಿವರಿಸಿದರು.

ಶಿಕ್ಷಣದ ವಿಚಾರದಲ್ಲಿ ವಿನಾಕಾರಣವಾಗಿ ಗೊಂದಲ ನಿರ್ಮಿಸಲಾಗುತ್ತಿದೆ. ರಾಜ್ಯ ಶಿಕ್ಷಣ ನೀತಿ ಸಂಬಂಧ ತಾತ್ಕಾಲಿಕ ವರದಿ ನೀಡಿದ್ದು, 4 ವರ್ಷದ ಪದವಿ ಶಿಕ್ಷಣ ಬೇಕಿಲ್ಲ; 3 ವರ್ಷದ ಪದವಿಯೇ ಇರಲಿ ಎಂಬ ಸಲಹೆ, ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್‌ಅನ್ನು ರದ್ದು ಮಾಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಇದೆ. 4 ವರ್ಷದ ಪದವಿ ಕೋರ್ಸ್‌ ವಿದ್ಯಾರ್ಥಿ ಆಯ್ಕೆ ಆಧಾರಿತವಾಗಿ ಇರುತ್ತದೆ. ವಿಶ್ವಮಟ್ಟದಲ್ಲಿ 4 ವರ್ಷದ ಪದವಿ ಕೋರ್ಸ್‌ ಇದೆ. ಬೇರೆ ದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ತೆರಳುವವರಿಗೆ 4 ವರ್ಷದ ಪದವಿ ಓದಿರಬೇಕಾಗುತ್ತದೆ. ಡಾಕ್ಟರೇಟ್‌ ಪ್ರೋಗ್ರಾಂಗೆ ತೆರಳಲು ಇದರ ಆವಶ್ಯಕತೆ ಇದೆ. ಇಲ್ಲಿಯೇ ಮಾಸ್ಟರ್ಸ್‌ ಮಾಡುವುದಾದರೆ ಒಂದು ವರ್ಷ ಮಾತ್ರ ಸಾಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next