Advertisement

1200 ಕೋಟಿ ಅನುದಾನವನ್ನು KSRTCಗೆ ನೀಡಲಾಗಿದೆ : ಅಶ್ವತ್ಥ್ ನಾರಾಯಣ್

06:56 PM Apr 09, 2021 | Team Udayavani |

ಮಂಗಳೂರು : ಸಾರಿಗೆ ನೌಕರರ ಸಂಬಳದ ವಿಚಾರವನ್ನು ಸ್ವಾಯತ್ತ ಸಂಸ್ಥೆಗಳಿಗೆ ಬಿಡಲಾಗಿದೆ. ಅವರ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಸಂಬಳಗಳು ನಿಗದಿಯಾಗಲಿದೆ ಎಂದು ಶುಕ್ರವಾರ ಮಂಗಳೂರಿನಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನವನ್ನ ಬಿಡುಗಡೆ ಮಾಡಿದೆ. 1200 ಕೋಟಿ ಅನುದಾನವನ್ನು KSRTCಗೆ ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಸಾರಿಗೆ ಸಂಸ್ಥೆಗಳಿಗೆ ತುಂಬಾ ನಷ್ಟವಾಗಿದೆ. ಇದರ ನಡುವೆ ಸಾರಿಗೆ ನೌಕರರ ಬೇಡಿಕೆಗಳನ್ನು  ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಾಗುವುದಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಆರನೇ ವೇತನ ಆಯೋಗದ ಶಿಫಾರನ್ನು ಹೊರತುಪಡಿಸಿ ಉಳಿದ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ ಎಂದರು. ಇದೇ ವೇಳೆ ಬಸನಗೌಡ ಯತ್ನಾಳ್ ಅವರ ಸಿಎಂ ಬದಲಾವಣೆ ಹೇಳಿಕೆ ಬಗ್ಗೆ ಮಾತನಾಡಿದ್ದು, ಸಿಎಂ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಮುಂದುವರೆಯುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next